ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ “ಲಕ್ಷ್ಯ” ಆ್ಯಂಬಿಯೋರ-2024 ಸ್ಪರ್ಧೆಯನ್ನು ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಮುಖ್ಯ ಅತಿಥಿಯಾಗಿ ಬೆಂಗಳೂರಿನ ನಾರ್ದನ್ ಟ್ರಸ್ಟ್ ನ ಸೀನಿಯರ್ ಅನಲಿಸ್ಟ್ ಬಿಪಿನ್ ಸಂಕದ್ ಮಾತನಾಡಿ, ವಿದ್ಯಾರ್ಥಿಗಳು ಪ್ರತಿದಿನ ಹೊಸತನ್ನು ಕಲಿತು ಉತ್ತಮ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಪ್ರತಿಯೊಂದು ಸ್ಪರ್ಧೆಯೂ ಹೊಸ ವಿಷಯಗಳನ್ನು ಕಲಿಯುವಲ್ಲಿ ಸಹಕಾರಿಯಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಿನ್ಸಿಪಾಲ್ ವಂ.ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ, ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ದೊರಕುವಜ್ಞಾನ ಹಾಗೂ ಅನುಭವಗಳು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೃತ್ತಿ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಹಕಾರಿಯಾಗುತ್ತವೆ ಎಂದರು.
ಕಾಲೇಜಿನ ಉಪ ಪ್ರಿನ್ಸಿಪಾಲ್ ಡಾ.ಪಿ.ಎಸ್.ಕೃಷ್ಣಕುಮಾರ್ ಶುಭ ಹಾರೈಸಿದರು. ಪ್ರೀತಮ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ವಾಣಿಜ್ಯ ವಿಭಾಗದ ಡೀನ್ ಪ್ರೊ. ಪ್ರೇಮಲತಾ ಕೆ ಸ್ವಾಗತಿಸಿದರು. ಟಿನ್ಸಿ ಥಾಮಸ್ ಅತಿಥಿಗಳ ಪರಿಚಯ ಮಾಡಿದರು. ದ್ರುಪದ್ ವಂದಿಸಿದರು. ಟೀನಾ ಅಲ್ವೀರ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ಸ್ಪರ್ಧೆಯಲ್ಲಿ ವಿವಿಧ ಕಾಲೇಜುಗಳಿಂದ 14 ತಂಡಗಳು ಪಾಲ್ಗೊಂಡಿದ್ದವು. ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಿನ್ಸಿಪಾಲ್ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ವಹಿಸಿದ್ದರು. ಉಪ ಪ್ರಿನ್ಸಿಪಾಲ್ ಡಾ| ವಿಜಯ ಕುಮಾರ್ ಎಂ. ಪಾಲ್ಗೊಂಡಿದ್ದರು.
ವಿವೇಕಾನಂದ ಕಾಲೇಜು ತಂಡ ಪ್ರಶಸ್ತಿ ಪಡೆದರೆ, ಮಡಂತ್ಯಾರಿನ ಸೇಕ್ರೆಟ್ ಹಾರ್ಟ್ ಕಾಲೇಜ್ ರನ್ನರ್ಸ್ ಅಫ್ ಪ್ರಶಸ್ತಿ ಪಡೆದುಕೊಂಡಿತು. ಶ್ರುತ ರೈ ಸ್ವಾಗತಿಸಿ, ಸಂಯೋಜಕ ಧನ್ಯ ಪಿ.ಟಿ. ವಂದಿಸಿದರು, ನಿಶಾ ರಾಘವ ಕಾರ್ಯಕ್ರಮ ನಿರೂಪಿಸಿದರು.