ಸಿಸಿಟಿವಿಯಲ್ಲಿ ಕಂಡು ಬಂದ ಚಿರತೆ ಓಡಾಟ : ಭಯಭೀತರಾದ ಸ್ಥಳೀಯ ಜನ

ಬೆಳ್ತಂಗಡಿ: ಚಿರತೆಯೊಂದು ಓಡಾಡುತ್ತಿರುವ ದೃಶ್ಯ ಬೆಳ್ತಂಗಡಿಯ ಹುಣ್ಸೆಕಟ್ಟೆಯ ಪಂಜಿರ್ಪು ಎಂಬಲ್ಲಿ ಮುಂಜಾನೆ ನಡೆದಿದ್ದು, ಸಿಸಿಟಿವಿಯಲ್ಲಿ ಪತ್ತೆಯಾಗಿದೆ.

ಪಂಜಿರ್ಪು ಗಣೇಶ್ ಐತಾಳ್ ಎಂಬವರ ಮನೆ ಸಮೀಪ ಬೆಳಿಗ್ಗೆ 4 ಗಂಟೆಯ ಹೊತ್ತಿಗೆ ಚಿರತೆ ರಸ್ತೆಯ ಬದಿ ಓಡಾಡುತ್ತಿರುವ ದೃಶ್ಯ ಮನೆಯ ಸಿಸಿ ಕ್ಯಾಮರದಲ್ಲಿ ಪತ್ತೆಯಾಗಿದ್ದು, ಸ್ಥಳೀಯ ಜನತೆ ಇದೀಗ ಭಯಭೀತರಾಗಿದ್ದಾರೆ.

ಈ ಪ್ರದೇಶವು ನಗರದಿಂದ ಒಂದು ಕಿಮೀ ದೂರದಲ್ಲಿದ್ದು, ಸಮೀಪದ ಕೊಯ್ಯೂರು ಮತ್ತು ಗೇರುಕಟ್ಟೆ ಅರಣ್ಯ ಪ್ರದೇಶವಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top