ಬೆಳ್ಳಾರೆ: ಮುಸ್ತಫಾ ಪೈಚಾರ್ ಎನ್ನುವವನು ಈ ಪ್ರಕರಣದ ಪ್ರಮುಖ ಆರೋಪಿ ಅವನ ಬಂಧನವಾಗಿರುವುದು ನಮಗೆ ತುಂಬಾ ಸಂತೋಷದ ವಿಷಯ ಹಾಗೂ ಇವನ ಹಿಂದೆ ಇನ್ನೂ ಎಷ್ಟು ಮಂದಿ ಆರೋಪಿಗಳಿದ್ದಾರೋ ಅವರೆಲ್ಲರ ಬಂಧನ ಆಗಬಹುದೆಂಬ ಭರವಸೆ ಹಾಗೂ ನಂಬಿಕೆ ಎನ್ ಐಎ ಮೇಲೆ ಇದೆ ಎಂದು ಹತ್ಯೆಗೀಡಾದ ದಿ.ಪ್ರವೀಣ್ ನೆಟ್ಟಾರು ಪತ್ನಿ ನೂತನ ತಿಳಿಸಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ನಾಲ್ಕನೇ ಆರೋಪಿಯಾಗಿರುವ ಮುಸ್ತಫಾ ಪೈಚಾರ್ ಬಂಧಿಸಿರುವ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ನೂತನ ನೆಟ್ಟಾರುರವರು, ನನ್ನ ಪತಿಯ ಹತ್ಯೆ ನಡೆದು ಎರಡು ವರ್ಷ ಆಯಿತು ಆದರೂ, ಎನ್ ಐಎ ಯವರು ಈ ಪ್ರಕರಣದ ಆರೋಪಿಗಳನ್ನು ಹಿಡಿಯಲು ತುಂಬಾನೇ ಪ್ರಯತ್ನ ಪಡುತ್ತಿರುವುದು ನಮಗೆ ತಿಳಿದಿದೆ.
ಆರೋಪಿಗಳಿಗೆ ಆಗುವ ಶಿಕ್ಷೆ ಹೇಗಿರಬೇಕು ಎಂದರೆ, ಇನ್ನೆಂದೂ ಸಮಾಜದಲ್ಲಿ ಯಾರೂ ಯಾವತ್ತೂ ಇಂತಹ ಕೃತ್ಯ ಎಸಗಲು ಹೋಗಬಾರದು ಅಂತಹ ಶಿಕ್ಷೆವಿಧಿಸಬೇಕು. ಈ ಪ್ರಕರಣದಲ್ಲಿರುವ ಎಲ್ಲರೂ ಆರೋಪಿಗಳಿಗೆ ಮರಣದಂಡನೆ ಆಗಬೇಕು ಎಂಬುದು ನಮ್ಮೆಲ್ಲರ ಅಭಿಪ್ರಾಯ ಎಂದ ಅವರು,
ನಮ್ಮ ಕುಟುಂಬದ ಪರವಾಗಿ ಎನ್‌ಐಎ ಅಧಿಕಾರಿಗಳಿಗೆ ಧನ್ಯವಾದ ಹೇಳುತ್ತೇನೆ. ಬಂಧನ ಆಗಿರುವುದು ನಮಗೆಲ್ಲ ತುಂಬಾ ಖುಷಿಯಾಗಿದೆ ಎಂದರು.