ನಿರಂಜನ ಪ್ರಶಸ್ತಿಗೆ ಭಾಜನರಾದ ಪ್ರೊ ವಿ ಬಿ ಅರ್ತಿಕಜೆಯವರ ವ್ಯಕ್ತಿತ್ವ ಎಲ್ಲರಿಗೂ ಮಾದರಿ : ನಿರಂಜನ ಪ್ರಶಸ್ತಿ, ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ನಿರಂಜನ ವಾನಳ್ಳಿ

ಪುತ್ತೂರು: ನಿರಂಜನ ಪ್ರಶಸ್ತಿ ಹಾಗೂ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ವಿವೇಕಾನಂದ ಕಾಲೇಜಿನಲ್ಲಿ ನಡೆಯಿತು.

ಸಾಹಿತಿ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಪ್ರೊ ವಿ ಬಿ ಅರ್ತಿಕಜೆಯವರಿಗೆ ನಿರಂಜನ ಪ್ರಶಸ್ತಿ ನೀಡಿ  ಮಾತನಾಡಿದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ ವಾನಳ್ಳಿ, ಪುತ್ತೂರು ವಿವೇಕಾನಂದ ಕಾಲೇಜು ನಿರಂಜನರನ್ನು ಸದಾ ನೆನಪಿನಲ್ಲಿಟ್ಟುಕೊಂಡು ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುತ್ತಿರುವುದು ಸಮರ್ಥನೀಯ. ನಿರಂಜನರ ಕಾದಂಬರಿಗಳಿಂದ, ಅಂಕಣಗಳಿಂದ ಅಂದು ಮಾತ್ರವಲ್ಲ ಇಂದಿಗೂ ಜನ ಮನದಲ್ಲಿ  ಜೀವಂತವಾಗಿರುವವರು, ಪ್ರಗತಿ ಶೀಲರಾಗಿ ಉಚ್ಚ ಮಟ್ಟದಲ್ಲಿ ಸಾಧನೆ ಮಾಡಿದವರು. ಅಂತೆಯೇ ಇಂದು ನಿರಂಜನ ಪ್ರಶಸ್ತಿಗೆ ಭಾಜನರಾದ ಪ್ರೊ ವಿ ಬಿ ಅರ್ತಿಕಜೆ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗುವಂತದ್ದು. ಬಾಲ್ಯದಲ್ಲಿ ಅವರು ಪಟ್ಟ ಶ್ರಮ, ಅವರಲ್ಲಿದ್ದ ಛಲ ಇಂದು ಅವರನ್ನು ಈ ಮಟ್ಟಕ್ಕೆ  ಬೆಳೆಯುವಂತೆ ಮಾಡಿದೆ. ಪ್ರತಿಯೊಬ್ಬರೂ ಇವರಂತೆ ಆತ್ಮ ಸಾಕ್ಷಿಗೆ  ಅನುಗುಣವಾಗಿ ಕೆಲಸ ಮಾಡಿದರೆ ಆ ದೇಶ ಮುಂದುವರಿಯುತ್ತದೆ ಎಂದರು.

ಪ್ರಶಸ್ತಿ ಸ್ವೀಕರಿಸಿದ ವಿಶ್ರಾಂತ ಪ್ರಾಧ್ಯಾಪಕ ಪ್ರೊ ವಿ ಬಿ ಅರ್ತಿಕಜೆ ಮಾತನಾಡಿ, ನಿರಂಜನರೊಂದಿಗಿನ ಸಂಬಂಧ ಪವಿತ್ರವಾದುದು. ನಾವೇ ಆರಂಭಿಸಿದ ನಿರಂಜನ ಪ್ರಶಸ್ತಿಗೆ ನಾವೇ ಭಾಜಾನರಾಗುವುದು. ಅಂತೆಯೇ ಇಂದಿನ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿರುವುದು ಸಂತೋಷದ ವಿಚಾರ ಎಂದು ಅನಿಸಿಕೆಯನ್ನು ಹಂಚಿಕೊಳ್ಳುತ್ತ ನಿರಂಜನರ ಮತ್ತು  ಅನುಪಮ ನಿರಂಜನರವರ ಸಂಬಂಧವನ್ನು ನೆನೆಪಿಸಿಕೊಂಡರು.































 
 

ಬ್ರಹ್ಮ ಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಟಾನ ಸಂಸ್ಥೆಯ ಅಧ್ಯಕ್ಷ ರಮೇಶ್ ಭಟ್ ಬೈಪದವು ಮಾತನಾಡಿ,  ವರ್ಷದಲ್ಲಿ ಪ್ರತಿಭಾ ಪುರಸ್ಕಾರ, ಅಶಕ್ತರಿಗೆ ಧನ ಸಹಾಯ, ಕೋವಿಡ್ ಸಮಯದಲ್ಲಿ ಕಿಟ್ ಗಳನ್ನು ನೀಡುವುದು, ಆಶ್ರಮಗಳಿಗೆ ದೇಣಿಗೆ,  ರಕ್ತ ಪರೀಕ್ಷೆ, ಅರೋಗ್ಯ ತಪಾಸಣೆ,  ಹೀಗೆ ಅನೇಕ ಕಾರ್ಯಗಳಲ್ಲಿ  ನಮ್ಮ ಪ್ರತಿಷ್ಟಾನ  ತೊಡಗಿಸಿಕೊಂಡಿದೆ  ಎಂದು ಹೇಳುವುದು  ಹೆಮ್ಮೆಯ  ವಿಚಾರ.   ಇಂದಿನ  ವಿದ್ಯಾರ್ಥಿಗಳು ಮೊಬೈಲ್ ಗೆ ದಾಸರಾಗದೇ  ಸಮಯವನ್ನು ಸದುಪಯೋಗ ಮಾಡಿಕೊಂಡು  ಸಂಸ್ಕಾರಯುತ ಜೀವನ ನಡೆಸುವಂತಾಗಲಿ ಎಂದು ಹೇಳಿದರು.

ಬೆಟ್ಟoಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಪಕ  ಡಾ. ವರದರಾಜ ಚಂದ್ರಗಿರಿ ಮಾತನಾಡಿ, ವಿದ್ವಾಂಸರನ್ನು ಸೃಷ್ಟಿ ಮಾಡುವ ಹಾಗೂ ಗೌರವಿಸುವ ಉದ್ದೇಶದಿಂದ ಮಿತ್ತೂರು ಪ್ರತಿಷ್ಟಾನಕ್ಕೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಸಂಸ್ಥೆಯ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯ. ಹೊಸತನದ ಕಡೆಗೆ ಒಲವು ಹರಿಸುವ ತಿಮ್ಮಯ ಭಟ್ಟರ ಗುಣ ಹೊಸ ತಲೆಮಾರಿನ ಯುವಜನತೆಗೆ ಮಾದರಿ ಆಗಬೇಕೆಂದು ಹೇಳಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ ಯಂ ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದಿನ ಕಾಲದ ಸಾಹಿತಿಗಳು ಎಲೆ ಮರೆಯ ಕಾಯಿಯ ಹಾಗೆ ಉಳಿದು ಬಿಡುವುದನ್ನು ಕಾಣಬಹುದು. ಫೇಸ್ಬುಕ್ ಕಾಲಘಟ್ಟದಲ್ಲಿ ಪುಸ್ತಕಗಳು ವನ ಸುಮದಂತೆ ಹಿಂದೆ ಉಳಿದು ಬಿಡುತ್ತಿದೆ. ಇಂದು ಮುದ್ರಣಕ್ಕಿಂತ ಡಿಜಿಟಲ್ ಮಾಧ್ಯಮದಲ್ಲಿ ಬರಹಗಗಳನ್ನು ಕಾಣಬಹುದು. ಆದರೆ ಪುಸ್ತಕಗಳಿಗೆ ಅದರದೇ ಆದ ಮಹತ್ವವಿದೆ. ಈ ಕಾಲ ಘಟ್ಟದಲ್ಲಿ ಇಂತಹ ಕಾರ್ಯಕ್ರಮಗಳು ಯುವಜನತೆಗೆ ತಮ್ಮನ್ನು ತಾವು ಸಾಹಿತ್ಯಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗಲಿ ಎಂದರು.

ಪಡೀಲು ಶಂಕರ ಭಟ್ ದತ್ತಿ ನಿಧಿ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ದಿ. ಬಡಕ್ಕಿಲ್ಲ ಸೀತಾ ರಾಮ ಭಟ್ ಮತ್ತು ಲಕ್ಷ್ಮಿ ಅಮ್ಮ ಮೆಮೋರಿಯಲ್ ದತ್ತಿನಿಧಿಗೆ ಆಯ್ಕೆ ಆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳಿಕೃಷ್ಣ ಕೆ ಎನ್ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲ ವಿಷ್ಣು ಗಣಪತಿ ಭಟ್ ಸ್ವಾಗತಿಸಿ, ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ವಂದಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಡಾ  ಮೈತ್ರಿ ಭಟ್ ನಿರೂಪಿಸಿದರು.

ಸಾಹಿತಿ, ವಿಶ್ರಾಂತ ಪ್ರಾಧ್ಯಪಕ  ಪ್ರೊ ವಿ ಬಿ ಅರ್ತಿಕಜೆ ನಿರಂಜನ ಪ್ರಶಸ್ತಿ ಸ್ವೀಕರಿಸಿದರು.  ಬ್ರಹ್ಮ ಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಟಾನ ಸಂಸ್ಥೆ ಶಂಕರ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top