ಪುತ್ತೂರು: ತಾಲೂಕಿನ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ನಡೆದಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಜೀರ್ಣೋದ್ಧಾರ ಕಾರ್ಯಕ್ಕೆ ಈಗಾಗಲೇ ಮೂರು ಲಕ್ಷ ರೂ. ದೇಣಿಗೆ ನೀಡಲಾಗಿದೆ. ಇದೀಗ ಎರಡನೇ ಹಂತದ 2.50 ಲಕ್ಷ ರೂ. ಹೀಗೆ ಒಟ್ಟು 5.50 ಲಕ್ಷ ರೂ. ನೀಡಿದ್ದಾರೆ.
ಯೋಜನೆಯ ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ್ ಎಮ್. ಸಮಿತಿ ಸದಸ್ಯರಿಗೆ 2.50 ಲಕ್ಷ ಚೆಕ್ ನ್ನು ಶುಕ್ರವಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಬ್ರಹ್ಮಕಲಶೋತ್ಸವ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಸಂಚಾಲಕ ಸುಧಾಕರ ರಾವ್, ಕಾರ್ಯದರ್ಶಿ ಕೆ.ರಾಧಾಕೃಷ್ಣ ಬೋರ್ಕರ್, ಬಾಲಚಂದ್ರ ಗೌಡ ದೇವಸ್ಯ, ಜಯಂತ ಶೆಟ್ಟಿ, ಮಾಧವ ರೈ, ಜನಜಾಗೃತಿ ತಾಲೂಕು ಮಾಜಿ ಅಧ್ಯಕ್ಷ ಮಹಾಬಲ ರೈ ವಳತ್ತಡ್ಕ, ಸಂಟ್ಯಾರ್ ಒಕ್ಕೂಟದ ಅಧ್ಯಕ್ಷೆ ಅಂಬಿಕಾ ರಮೇಶ್, ಆರ್ಯಾಪು ಒಕ್ಕೂಟದ ಅಧ್ಯಕ್ಷ ಸಂದೀಪ್, ಸೇವಾ ಪ್ರತಿನಿಧಿ ಉಷಾ ಆಳ್ವ ಉಪಸ್ಥಿತರಿದ್ದರು.