ಪುತ್ತೂರು : ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮೂಲಕ ಪುತ್ತೂರು ಹಾಗೂ ಊರವರ ಸಹಾಯ ಹಸ್ತದಿಂದ ಅನಾರೋಗ್ಯದಲ್ಲಿದ್ದ ಸುಂದರ ನಾಯ್ಕ ಬಿ.ಕೆ.ಯವರಿಗೆ 37,000 ಆರ್ಥಿಕ ಧನ ಸಹಾಯ ಹಸ್ತಾಂತರಿಸಲಾಯಿತು.
ಸುಂದರ ನಾಯ್ಕ ಅವರ ಮನೆಗೆ ಭೇಟಿ ನೀಡಿ ಅರೋಗ್ಯ ವಿಚಾರಿಸಿದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಧನ ಸಹಾಯ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮುಂಡೂರು ಹಾಲು ಉತ್ಪದಕ ಸಹಕಾರ ಸಂಘದ ನಿರ್ದೇಶಕ ಅನಿಲ್ ಕುಮಾರ್ ಕಣ್ಣಾರ್ನುಜಿ, ಗ್ರಾಮ ಪಂಚಾಯಿತಿ ಸದಸ್ಯ ಬಾಲಕೃಷ್ಣ ಪೂಜಾರಿ ಕುರೆಮಜಲು, ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಪ್ರಸಾದ್ ಬಿ.ಕೆ., ಮೋಹನ್ ನಾಯ್ಕ ಕೇದಗೆದಡಿ, ಹರೀಶ ಬಿ.ಕೆ., ರುಕ್ಮಯ ಕೇದಗೆದಡಿ, ಧನಂಜಯ ಕಲ್ಲಮ ಉಪಸ್ಥಿತರಿದ್ದರು.
























