ಪುತ್ತೂರು: ಪುತ್ತೂರು ಜೆಸಿಐ ವತಿಯಿಂದ 2024ನೇ ಸಾಲಿನ ಉಚಿತ ಇಲಾಖಾ ತರಬೇತಿ ಉದ್ಘಾಟನೆಗೊಂಡಿತು.
ಜೆಸಿಐ ಭಾರತದ ರಾಷ್ಟ್ರೀಯ ಸಂಯೋಜಕಿ, ನ್ಯಾಯವಾದಿ ಸ್ವಾತಿ ಜೆ.ರೈ ತರಬೇತಿ ಉದ್ಘಾಟಿಸಿ ಮಾತನಾಡಿ, ಸಮಾಜ ಸೇವೆ ಮಾಡುವುದು ತಂದೆ ತಾಯಿಯ ಋಣವನ್ನು ಸಂದಾಯ ಮಾಡಿದಂತೆ. ಉಚಿತ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಅದರ ಪ್ರಯೋಜನ ಪಡೆದುಕೊಳ್ಳುವ ಮೂಲಕ ಸರಕಾರದ ಕೆಲಸ ದೇವರ ಕೆಲಸವೆಂದು ತಿಳಿದು ಭ್ರಷ್ಟಾಚಾರ ರಹಿತ ಸೇವೆ ಮಾಡಿ ಎಂದ ಅವರು, ಉಚಿತ ತರಬೇತಿ ವ್ಯವಸ್ಥೆ ಮಾಡಿದ ಜೆಸಿಐ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿ ಪುತ್ತೂರು ಶಿವರಾಮ ಕಾರಂತ ಪ್ರೌಢಶಾಲಾ ಶಿಕ್ಷಕಿ ಡಾ. ಚಾಂದಿನಿ ಮಾತನಾಡಿ, ಕಬ್ಬಿಣದ ಕಡಲೆಯಂತಿರುವ ಪರೀಕ್ಷೆಯನ್ನು ಎದುರಿಸಲು ಜೆಸಿಐ ಸಂಸ್ಥೆ ಸರಕಾರಿ ನೌಕರರಿಗೆ ಅನುಕೂಲವಾಗುವಂತೆ ಉಚಿತ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದರು.
ಪುತ್ತೂರು ಜೆಸಿಐ ಘಟಕದ ಅಧ್ಯಕ್ಷ ಮೋಹನ್ ಕೆ. ಅಧ್ಯಕ್ಷತೆ ವಹಿಸಿದ್ದರು. ಜಿತೇಶ್ ರೈ ಜೇಸಿವಾಣಿ ವಾಚಿಸಿದರು. ಅನುಶ್ರೀ ಸಾಮೆತ್ತಡ್ಕ ಪ್ರಾರ್ಥಿಸಿದರು. ಸಿಡಿಪಿಒ ಕಚೇರಿ ಮೇಲ್ವಿಚಾರಕಿ ಪುಷ್ಪಲತ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೂರಪ್ಪ ಗೌಡ, ದಾಮೋದರ ಪಾಟಾಳಿ ಮಾಲಿನಿ ಕಶ್ಯಪ್ ಅತಿಥಿಗಳನ್ನು ಪರಿಚಯಿಸಿದರು. ನಾಗರಿಕ ಸೇವಾ ಪ್ರಶಸ್ತಿ ಪುರಸ್ಕೃತ ತರಬೇತುದಾರ ಗಂಗಾಧರ್ ಮಂಗಲ್ಪಾಡಿ ಉಪಸ್ಥಿತರಿದ್ದರು.