ಮನುಶ್ರೀ ದತ್ತಿ ಪ್ರಶಸ್ತಿಗೆ ಹಿರಿಯ ಲೇಖಕ ಪ.ರಾಮಕೃಷ್ಣ ಶಾಸ್ತ್ರಿ ಆಯ್ಕೆ

ಬೆಳ್ತಂಗಡಿ: 2024ರ ಮನುಶ್ರೀ ಕನ್ನಡ ಸಾಹಿತ್ಯ ಪರಿಷತ್ತಿನ  ಮನೋಹರಿ ಪಾರ್ಥಸಾರಥಿ ‘ಮನುಶ್ರೀ ’ ದತ್ತಿ ಪ್ರಶಸ್ತಿಗೆ  ಹಿರಿಯ ಲೇಖಕ ಪ.ರಾಮಕೃಷ್ಣ ಶಾಸ್ತ್ರಿಯವರನ್ನು ಆಯ್ಕೆ ಮಾಡಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮನೋಹರಿ ಪಾರ್ಥಸಾರಥಿಯವರು ಈ ದತ್ತಿಯನ್ನು ಸ್ಥಾಪಿಸಿದ್ದು ಕನ್ನಡ ಸಾಹಿತ್ಯದಲ್ಲಿ  ಮಹತ್ವದ ಸೇವೆ ಸಲ್ಲಿಸಿದ ಬರಹಗಾರರಿಗೆ ಈ ಪುರಸ್ಕಾರವನ್ನು ನೀಡಲಾಗುತ್ತದೆ.

ಬೆಳ್ತಂಗಡಿಯ ತೆಂಕಕಾರಂದೂರಿನವರಾದ ಪ.ರಾಮಕೃಷ್ಣ ಶಾಸ್ತ್ರಿಗಳು ಕನ್ನಡ ಸಾಹಿತ್ಯ ಕಂಡ ವಿಶಿಷ್ಟ ಲೇಖಕರು. ವೃತ್ತಿಯಲ್ಲಿ ಕೃಷಿಕರಾದ ಇವರು ಪ್ರವೃತ್ತಿಯಲ್ಲಿ ಸಾಹಿತ್ಯ ಕೃಷಿಕರು. 1964ರಿಂದ ಹಿಡಿದು ಇಂದಿನವರೆಗೂ ದಣಿವರಿಯದೆ  ನಿರಂತರವಾಗಿ ಬರೆಯುತ್ತಾ ಬರುತ್ತಿರುವ ಇವರ ಹನ್ನೆರಡು ಸಾವಿರಕ್ಕೂ ಹೆಚ್ಚು ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ವಿವಿಧ ಪ್ರಕಾರದಲ್ಲಿ 104 ಕೃತಿಗಳು ಅಚ್ಚಾಗಿವೆ. ಇದರಲ್ಲಿ ಮಕ್ಕಳಿಗಾಗಿಯೇ 50 ಕಥಾ ಸಂಕಲನಗಳಿರುವುದು ವಿಶೇಷ. ತುಳು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿಯೂ ಕಥೆ-ಕಾದಂಬರಿಗಳನ್ನು ಬರೆದಿರುವ ಇವರು ವಿಜ್ಞಾನ, ಅಧ್ಯಾತ್ಮ, ವೈಚಾರಿಕ ಕ್ಷೇತ್ರಗಳಲ್ಲಿಯೂ ಬರಹಗಳನ್ನು ಮಾಡಿದ್ದಾರೆ. ಮೂವತ್ತಕ್ಕೂ ಹೆಚ್ಚು ವಿವಿಧ ಪುರಸ್ಕಾರಗಳನ್ನು ಪಡೆದಿರುವ ರಾಮಕೃಷ್ಣ ಶಾಸ್ತ್ರಿಗಳು ತಾಲೂಕು ಸಾಹಿತ್ಯ ಸಮ್ಮೇಳನದ  ಅಧ್ಯಕ್ಷತೆಯನ್ನೂ ವಹಿಸಿದ್ದಾರೆ. ಸಾಹಿತ್ಯದ ಜತೆಗೆ ಯಕ್ಷಗಾನ ತಾಳಮದ್ದಳೆಯಲ್ಲಿ ಅರ್ಥಗಾರಿಕೆ, ಗಮಕ ವಾಚನದಲ್ಲಿಯೂ ಅವರು ಹೆಸರನ್ನು ಮಾಡಿದ್ದಾರೆ. ಅವರ ಬರಹಗಳು ಮಹಾರಾಷ್ಟ್ರದ ಕನ್ನಡ ಶಾಲೆಗಳಿಗೆ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗಳಿಗೆ ಪಠ್ಯವಾಗಿದೆ.































 
 

ನಾಡೋಜ ಡಾ.ಮಹೇಶ ಜೋಶಿಯವರ  ಅಧ್ಯಕ್ಷತೆಯಲ್ಲಿ  ನಡೆದ ಪ್ರಶಸ್ತಿಯ ಆಯ್ಕೆ ಸಮಿತಿ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು, ನೇ.ಭ.ರಾಮಲಿಂಗ ಶೆಟ್ಟಿ ಮತ್ತು  ದತ್ತಿದಾನಿಗಳ ಪರವಾಗಿ ಡಾ.ವರದಾ ಶ್ರೀನಿವಾಸ್ ಭಾಗವಹಿಸಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top