ಪುತ್ತೂರು- ವಿಟ್ಲ ಸರಕಾರಿ ಬಸ್ ಸಂಚಾರ ರದ್ದು : ಪುನರಾರಂಭಿಸುವಂತೆ ಶಾಸಕರಿಗೆ ಮನವಿ

ಪುತ್ತೂರು: ಪುತ್ತೂರಿನಿಂದ ವಿಟ್ಲಕ್ಕೆ ಸಂಚರಿಸುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಸಂಚಾರವನ್ನು ಕಳೆದ ನಾಲ್ಕು ತಿಂಗಳುಗಳಿಂದ ರದ್ದು ಮಾಡಲಾಗಿದ್ದು, ಬಸ್ ವ್ಯವಸ್ಥೆ ಪುನರಾರಂಭ ಮಾಡಬೇಕೆಂದು ವಿಟ್ಲ‌ ಭಾಗದ ವಕೀಲರು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರಿಗೆ ಮನವಿ ‌ಮಾಡಿದರು.

ಸಂಜೆ 7 ಮತ್ತು ಬೆಳಿಗ್ಗೆ ಬಿಸಿರೋಡಿಂದ ವಿಟ್ಲ ಮಾರ್ಗವಾಗಿ ಪುತ್ತೂರಿಗೆ ಬರುತ್ತಿದ್ದ ಬಸ್ಸು ಕಳೆದ ನಾಲ್ಕು ತಿಂಗಳಿನಿಂದ ಸಂಚಾರ ನಿಲ್ಲಿಸಲಾಗಿದೆ. ಈ ಬಗ್ಗೆ ಕೆಎಸ್ ಆರ್ ಟಿಸಿ ಅಧಿಕಾರಿಗಳ ಬಳಿ ಮಾಹಿತಿ ಪಡೆದ ಶಾಸಕರು ಎರಡು ದಿನದೊಳಗೆ ವ್ಯವಸ್ಥೆ ಸರಿಪಡಿಸುವಂತೆ ಸೂಚನೆ ‌ನೀಡಿದರು.

ಮನವಿ ನೀಡುವ ಸಂದರ್ಭ ವಕೀಲರಾದ ಅಶೋಕ್ ಸಿ ಎಚ್, ಸುಪ್ರಿತಾ, ಚಂದ್ರಹಾಸ, ಸಂತೋಷ್ ಕೆ ಆರ್ ಉಪಸ್ಥಿತರಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top