ಆರೋಗ್ಯ ರಕ್ಷಕರಿಗೆ ವೇತನ ಸಮಸ್ಯೆ |ಇನ್ನೂ ಬಾರದ ವೇತನ

ಆರೋಗ್ಯ ಕವಚ ಸಿಬ್ಭಂದಿಗಳಿಗೆ ಕಳೆದ ಹಲವು ತಿಂಗಳುಗಳಿಂದ ವೇತನವಾಗಿಲ್ಲ. 108 ಆ್ಯಂಬುಲೆನ್ಸ್ ಚಾಲಕ, ಶುಶ್ರೂಷಕರಿಗೆ ಕೂಡಾ ಸಂಬಳವಾಗಿಲ್ಲ. ಗ್ರಾಮೀಣ ಭಾಗದ ಜೀವ ರಕ್ಷಕರ ಸ್ಥಿತಿ ಪರದಾಡುವಂತಾಗಿದೆ. 108 ಸೇವೆಯು ಗ್ರಾಮೀಣ ಭಾಗದಲ್ಲಿ ಆರೋಗ್ಯ ರಕ್ಷಣೆಗಾಗಿ ಪರದಾಡುವ ವೇಳೆ ಜೀವ ಉಳಿಸುವ ಸೇವೆಯಾಗಿದೆ. ನಗರ ಪ್ರದೇಶಕ್ಕೂ  ಹಲವು ಅನುಕೂಲವಿದೆ. ಆದರೆ ಸಿಬ್ಭಂದಿಗಳು ಮಾತ್ರಾ ವೇತನವಿಲ್ಲದೆ ಪರದಾಡುತ್ತಿದ್ದಾರೆ.

ಏಪ್ರಿಲ್ 8 ರಿಂದ 108 ಅಂಬುಲೆನ್ಸ್‌ ವಾಹನಗಳು ರಸ್ತೆಗೆ ಇಳಿಯುವುದಿಲ್ಲ ಎಂದು ಈ ಹಿಂದೆ ಎಚ್ಚರಿಕೆ ನೀಡಿದ್ದರು. ಸಾಮೂಹಿಕವಾಗಿ ರಜೆ ಹಾಕಲು  ಹಾಕುವ ಎಚ್ಚರಿಕೆಯನ್ನೂ ನೀಡಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಸ್ವಲ್ಪ ದಿನ ಮುಂದೂಡಿದ್ದರು. ಈಗಲೂ ಕೂಡಾ ವೇತನವಾಗಿಲ್ಲ.

ರಾಜ್ಯದಲ್ಲಿ ಜಿವಿಕೆ ಅಡಿಯಲ್ಲಿ 3500ಕ್ಕೂ ಅಧಿಕ ಸಿಬಂದಿಗಳು ಇದ್ದಾರೆ. ಡಿಸೆಂಬರ್‌ನಿಂದಲೇ ಇವರಿಗೆ ಸರಿಯಾಗಿ ಮಾಸಿಕ ವೇತನ ಪಾವತಿಯಾಗಿಲ್ಲ. ಈ ಬಗ್ಗೆ ಜಿವಿಕೆಯನ್ನು ಪ್ರಶ್ನಿಸಿದರೆ, ಸರ್ಕಾರ ಅನುದಾನ ನೀಡಿಲ್ಲ ಎಂದು ಹೇಳುತ್ತಾರೆ. ಆ್ಯಂಬುಲೆನ್ಸ್ ಸಿಬ್ಭಂದಿಗೆ ವೇತನ ಸಮಸ್ಯೆ ಕಳೆದ ಎರಡು ವರ್ಷಗಳಿಂದ ಇದೆ. ಇದನ್ನು ಜಿವಿಕೆ ಗಮನಕ್ಕೆ ತಂದಾಗ ಒಮ್ಮೆಗೆ ಸರಿಯಾಗುತ್ತದೆ ಮತ್ತೆ ಅದೇ ಸಮಸ್ಯೆ ಪುನರಾವರ್ತನೆಯಾಗುತ್ತಿದೆ.



































 
 

ಗ್ರಾಮೀಣ ಭಾಗದ ಉತ್ತಮವಾಗಿ ಸೇವೆಗೆ ಕಾರಣವಾಗುತ್ತಿರುವ 108 ಸೇವೆಯು ಗ್ರಾಮೀಣ ಜನರ ಆರೋಗ್ಯ ರಕ್ಷಕನಾಗಿ ಕೆಲಸ ಮಾಡುತ್ತಿದೆ. ಹೀಗಿರುವಾಗ ಸಿಬ್ಭಂದಿಗಳಿಗೆ ಸರಿಯಾದ ವೇತನ ನೀಡಿ ಸೇವೆಯನ್ನು ಒದಗಿಸುವಂತೆ ಮಾಡಬೇಕಾದ್ದು ಸರ್ಕಾರ ಜವಾಬ್ದಾರಿಯೂ ಆಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top