ಪುತ್ತೂರು: ನೆಹರುನಗರ ವಿವೇಕಾನಂದ ಕಾಲೇಜು ಸಂಪರ್ಕ ರೈಲ್ವೇ ಮೇಲ್ಸೇತುವೆ ಕಾಮಗಾರಿ ಸಂಪೂರ್ಣಗೊಂಡಿದ್ದು, ಇದೀಗ ಪಾದಚಾರಿಗಳ, ವಾಹನ ಸಂಚಾರಕ್ಕೆ ತೆರದುಕೊಂಡಿದೆ.
ಕಳೆದ ಹಲವಾರು ವರ್ಷಗಳ ಬೇಡಿಕೆಯಾಗಿದ್ದ ಈ ಸೇತುವೆ ಅಗಲ ಕಿರಿದಾಗಿತ್ತು. ಒಂದು ಬಾರಿಗೆ ಒಂದೇ ನಾಲ್ಕು ಚಕ್ರದ ವಾಹನ ಚಲಿಸುವಂತಿತ್ತು. ಇದೀಗ ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ.
ಆದರೆ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಯಾವುದೇ ಕಾರ್ಯಕ್ರಮದ ಮೂಲಕ ಉದ್ಘಾಟನೆ ಮಾಡುವ ಹಾಗಿಲ್ಲ. ಅಂತೂ ವಾಹನಗಳು, ಪಾದಚಾರಿಗಳು ಇದೀಗ ಸಂಚರಿಸುವಂತಾಗಿದೆ.