ಥಾಯ್ಲೆಂಡ್: ಕೇರಳದ ಶಿಕ್ಷಕಿಯೊಬ್ಬರು ಪ್ಯಾರಾಗ್ಲೀಡಿಂಗ್ ಮಾಡುವಾಗ ಥಾಯ್ಲೆಂಡ್‌ನಲ್ಲಿ ದುರಂತ ಅಂತ್ಯ ಕಂಡಿದ್ದಾರೆ.
ಚಿರಂಚಿರ ಸರಕಾರಿ ಯುಪಿ ಶಾಲೆಯ ಮುಖ್ಯ ಶಿಕ್ಷಕಿ ರಾಣಿ ಮ್ಯಾಥ್ ಮೃತಪಟ್ಟವರು.
ರಾಣಿ ಮ್ಯಾಥ್ ಅವರ ಪತಿ ಕೂಡ ಥಾಯ್ಲೆಂಡ್‌ನಲ್ಲಿದ್ದಾರೆ. ಅವರು ರಜೆಯಲ್ಲಿ ಸುತ್ತಾಡಲು ಥಾಯ್ಲೆಂಡ್ ಗೆ ಹೋಗಿದ್ದರು.. ಅಪಘಾತದಲ್ಲಿ ಗಾಯಗೊಂಡಿದ್ದ ಅವರು ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರದ ನಂತರ ಮೃತದೇಹವನ್ನು ಮನೆಗೆ ತರಲಾಗುವುದು ಎಂದು ಸಂಬಂಧಿಕರು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.
























