ಪುತ್ತೂರು: ಧರ್ಮ ರಕ್ಷಣೆಯ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ದೇವರ ಆರಾದನೆ ದೇವಸ್ಥಾನದಲ್ಲಿ ಮಾತ್ರವಲ್ಲ. ಪ್ರತಿ ಮನೆಯಲ್ಲಿ ನಡೆಯಬೇಕು. ಧರ್ಮ ರಕ್ಷಣೆಯೇ ಉಪಾಸನೆಯ ಅಂಗ. ಯಾವುದೇ ಕ್ಷೇತ್ರದಲ್ಲಿ ನಷ್ಟವಾದ ಚೈತನ್ಯ ತುಂಬಿಸುವುದೇ ಬ್ರಹ್ಮಕಲಶ. ಬ್ರಹ್ಮಕಲಶದ ಬಳಿಕ ಚೈತನ್ಯ ಬೆಳಗಲಿದೆ. ಧರ್ಮದ ಆಚರಣೆ ಮಾಡಿದಾಗ ಮನುಷ್ಯ ಜನ್ಮ ಸಾಥಕ. ಉತ್ತಮ ಕಾರ್ಯಗಳು, ಉತ್ತಮ ಸ್ಥಾನ ಲಭಿಸಲಿದೆ ಎಂದು ಕೆಮ್ಮಿಂಜೆ ಕಾರ್ತಿಕ ತಂತ್ರಿಯವರು ಹೇಳಿದರು.
ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ನಡೆದ ಕೊನೆಯ ದಿನದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.
ದೀಪ ಬೆಳಗಿಸಿ ಉದ್ಘಾಟಿಸಿದ ಕ್ಷೇತ್ರದ ವಾಸ್ತುಶಿಲ್ಪಿ ಕೃಷ್ಣಪ್ರಸಾದ್ ಮುನಿಯಂಗಳ ಮಾತನಾಡಿ, ಭಗವಂತನನ್ನು ನಾಶ ಪಡಿಸಲು ಸಾಧ್ಯವಿಲ್ಲ. ಶಾಶ್ವತವಾದ ಸ್ಥಾನ ಪಡೆಯಲು ಭಗವತ್ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ದೇವಸ್ಥಾನದಲ್ಲಿ ಶಿಸ್ತು ಇರಬೇಕು. ದೀಪಾರದನೆ, ನಾಮಸ್ಮರಣೆ, ಕ್ಷೇತ್ರದ ನಿಯಮಗಳನ್ನು ಪಾಲಿಸಿದಾಗ ಮಹಾಕ್ಷೇತ್ರವಾಗಿ ಬೆಳೆಯಲಿದೆ ಎಂದ ಅವರು ಕಾರ್ಪಾಡಿಯಲ್ಲಿ ದೇವಸ್ಥಾನಕ್ಕೆ ಆವಶ್ಯಕವಾದ ಜಾಗವನ್ನು ಪೂರೈಸುವ ಮೂಲಕ ನೀಡಿದ ಮಾತನ್ನುನೆರವೇರಿಸಿರುವು ಸನ್ಮಾನಿಕಿಂತ ದೊಡ್ಡ ಗೌರವ ದೊರೆತಿದೆ. ಪ್ರಾಮಾಣಿಕತೆಯಿಂದ ಮಾಡಿದ ಸೇವೆಗೆ ದೇವರ ಅನುಗ್ರಹ ಪ್ರಾಪ್ತಿಯಾಗಿರುವುದಕ್ಕೆ ಕಾರ್ಪಾಡಿ ಕ್ಷೇತ್ರವೇ ಸಾಕ್ಷಿಯಾಗಿದೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯಗಳು ಸುಬ್ರಹ್ಮಣ್ಯ ದೇವರ ಅನುಗ್ರಹದಿಂದ ಸುಸೂತ್ರವಾಗಿ ನಡೆದಿದೆ. ನಮಗೆ ನೀಡಿದ ಜವಾಬ್ದಾರಿಯುತ ಸ್ಥಾನವನ್ನು ತಂಡದ ಮೂಲಕ ನಿರ್ವಹಿಸಲಾಗಿದೆ. ಇಲ್ಲಿ ರಕ್ತವನ್ನು ಬೆವರಾಗಿ ಮಾಡಿದ ನೂರಾರು ಮಂದಿ ಸ್ವಯಂ ಸೇವಕರ ಸೇವೆಯಿಂದ ಜೀರ್ಣೋದ್ಧ್ದಾರ ಹಾಗೂ ಬ್ರಹ್ಮಕಲಶ ನೆರವೇರಿರುತ್ತದೆ. ನೂರಾರು ಮಂದಿ ದಾನಿಗಳು ವಿವಿಧ ರೂಪದಲ್ಲಿ ಸಹಕರಿಸಿದ್ದಾರೆ. ೧೪ ತಿಂಗಳಲ್ಲಿ ಭವ್ಯ ದೇಗುಲ ನಿರ್ಮಾಣವಾಗಿದೆ. ದೇವರ ದೃಢಕಲಶದ ದಿನ ಸಹಕರಿಸಿದ ಎಲ್ಲಾ ಸ್ವಯಂ ಸೇವಕರು, ದಾನಿಗಳನ್ನು ಗೌರವಿಸಲಾಗುವುದು ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಸುಧಾಕರ ರಾವ್ ಆರ್ಯಾಪು ಮಾತನಾಡಿ, ಕಳೆದ ವರ್ಷದ ದೇವರ ಜಾತ್ರೆಯ ಬಳಿಕ ದೇವರನ್ನು ಬಾಲಲಯದಲ್ಲಿ ಪ್ರತಿಷ್ಠಾಪಿಸಿದ ಮರುದಿನದಿಂದಲೇ ಜೀಣೋದ್ಧಾರ ಪ್ರಾರಂಭಗೊಂಡಿದೆ. ನಂತರ ನಿರಂತರವಾಗಿ ಒಂದು ವರ್ಷ ಎರಡು ತಿಂಗಳ ಕಾಲ ನಡೆದ ಜೀರ್ಣೋದ್ಧಾರದ ಕಾರ್ಯದಲ್ಲಿ ಹಗಲು-ರಾತ್ರಿ ದುಡಿದ ಕರಸೇವಕರ ಶ್ರಮದ ಫಲವಾಗಿ ಭವ್ಯವಾದ ದೇವಾಲಯ ನಿರ್ಮಾಣಗೊಂಡು ಬ್ರಹ್ಮಕಲಶ ನೆರವೇರುತ್ತಿದೆ. ಇಲ್ಲಿ ಎಲ್ಲವೂ ದೇವರ ಲೀಲೆಯಂತೆ ನಡೆದಿದೆ. ಕರಸೇವಕರು, ಭಕ್ತರು, ದಾನಿಗಳು ಈ ಮಹಾಕಾರ್ಯದಲ್ಲಿ ನಮ್ಮ ಜೊತೆಯಾಗಿ ಪಾಲ್ಗೊಂಡು ಊರಿಗೆ ನೆಮ್ಮದಿಯ ಫಲ ನೀಡಿದ್ದಾರೆ. ಜೊತೆಗೆ ವಿವಿಧ ಮನೆತನಗಳು, ನೆರೆಯ ಹಲವು ಗ್ರಾಮದ ಭಕ್ತಾದಿಗಳು ಸಹಕಾರ ನೀಡಿದ್ದು ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಷತೆ ಸಲ್ಲಿಸಿದರು.
ಮಂಗಳೂರಿನ ಆರ್ಥೋಪೆಡಿಕ್ ಸರ್ಜನ್ ಡಾ.ಸಚ್ಚಿದಾನಂದ ರೈ, ಪ್ರಗತಿಪರ ಗೇರು ಕೃಷಿಕ ಕಡಮಜಲು ಸುಭಾಷ್ ರೈ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದ, ಕೃಷಿಕ ಎಂ.ಬಿ ವಿಶ್ವನಾಥ ರೈ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಬಂಗಾರಡ್ಕ ವಿಶ್ವೇಶ್ವರ ಭಟ್, ಡಾ.ಹರಿಕೃಷ್ಣ ಪಾಣಾಜೆ, ರಾಮಚಂದ್ರ ರಾವ್ ಸುಂದರವನ ಬೆಂಗಳೂರು, ಸಂದೀಪ್ ಕಾರಂತ ಕಾರ್ಪಾಡಿ, ದೇವಸ್ಥಾನದ ಆಡಳಿತಾಧಿಕಾರಿ ಗೋಪಾಲ್ ಸಂದರ್ಭೋಚಿತವಾಗಿ ಮಾತನಾಡಿದರು.
ಸುಜಾತ ಶ್ಯಾಮ್ಪ್ರಸಾದ್ ಭಟ್ ಅಧ್ಯಕ್ಷತೆ ವಹಿಸಿದ್ದರು. ರತ್ನಾಕರ ರೈ ಕೆದಂಬಾಡಿ ಗುತ್ತು, ಪಂಬೆತ್ತಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪುರುಷೋತ್ತಮ ಶೆಟ್ಟಿ ಗೆಣಸಿನಕುಮೇರು, ಕುಂಜೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪ್ರದೀಪಕೃಷ್ಣ ಬಂಗಾರಡ್ಕ, ಗಣೇಶ್ ಎ.ಎನ್ ಕಲ್ಲರ್ಪೆ, ಬೆಂಗಳೂರಿನ ಉದ್ಯಮಿ ಪ್ರಭಾಕರ ವಾಗ್ಲೆ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ ದೇವಸ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಕ್ಷೇತ್ರದ ವಾಸ್ತುಶಿಲ್ಪಿ ಕೃಷ್ಣಪ್ರಸಾದ್ ಮುನಿಯಂಗಲ, ದೇವಸ್ಥಾನದ ಜೀರ್ಣೋದ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಸದಾನಂದ ಶೆಟ್ಟಿ ಕೂರೇಲು ಹಾಗೂ ಸುಧಾಕರ ರಾವ್ ಆರ್ಯಾಪು, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಸದಸ್ಯರಾದ ದೇವಯ್ಯ ಗೌಡ ದೇವಸ್ಯ, ದಾಮೋದರ ರೈ ತೊಟ್ಲ, ವಿಠಲ ರೈ ಮೇರ್ಲ, ಕಿಶೋರ್ ಮರಿಕೆ, ಭಾರತಿ ಸಾಂತಪ್ಪ ಪೂಜಾರಿ, ವನಿತಾ ನಾಯಕ್, ವಿನಯ ನಾಯ್ಕ ಕೊಟ್ಲಾರು, ಬ್ರಹ್ಮಕಲಶೋತ್ಸವ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ ದೇವಸ್ಯ, ಕ್ಷೇತ್ರದ ಜೀಣೋದ್ಧಾರದ ಸಂದರ್ಭದಲ್ಲಿ ಅಡುಗೆ ಕೆಲಸದಲ್ಲಿ ಸಹಕರಿದ ಚಂದ್ರಕಲಾ ಜಗದೀಶ್, ಕಚೇರಿ ನಿರ್ವಹಣೆಯಲ್ಲಿ ವ್ಯವಸ್ಥಾಪಕರಾಗಿ ಮಹೇಶ್ ಕಿರಣ್ ಶೆಟ್ಟಿ ಮಲಾರ್, ನಿವೃತ್ತ ಯೋಧ ಬಾಲಕೃಷ್ಣ ಎನ್. ಕಲ್ಲರ್ಪೆ ಹಾಗೂ ರಾಷ್ಟ್ರಮಟ್ಟದ ಕ್ರೀಡಾ ಸಾಧಕಿ ಡಿಂಪಲ್ ಶೆಟ್ಟಿ, ಪಾಕತಜ್ಞ ಕೃಷ್ಣಪ್ರಸಾದ್ ಭಟ್ ಕೆಯ್ಯೂರು, ಸುಸಜ್ಜಿತ ಸಭಾಂಗಣ ನಿರ್ಮಿಸಿದ ಇರ್ದೆ ಫ್ರೆಂಡ್ಸ್ ಸೌಂಡ್ಸ್& ಶಾಮಿಯಾನದ ರಾಧಾಕೃಷ್ಣ ಬೋರ್ಕರ್ರವರನ್ನು ಸನ್ಮಾನಿಸಲಾಯಿತು.
ಹೇಮಲತಾ ಹಾಗೂ ಮೋಕ್ಷ ಪ್ರಾರ್ಥಿಸಿದರು. ಸಮಿತಿ ಉಪಾಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ, ಅಂಬಿಕಾ ರಮೇಶ್, ವಿಜಯ ಬಿ.ಎಸ್., ದಾಮೋದರ ರೈ ತೊಟ್ಲ, ಹರೀಶ್ ನಾಯಕ್ ವಾಗ್ಲೆ, ರೋಹಿತ್ ಬರೆಮೇಲು, ಕುಶಾಲಪ್ಪ ಸುವರ್ಣ ಮರಿಕೆ, ಸೂರ್ಯ ಮಣಿಯಾಣಿ ಕಲ್ಲರ್ಪೆ, ಪವನ್ ಶೆಟ್ಟಿ ಕಂಬಳತ್ತಡ್ಡ, ಕೇಶವ ಗೌಡ ಕುಕ್ಕಾಡಿ, ಯೋಗೀಶ್ ನಾಯ್ಕ ದೊಡ್ಡಡ್ಕ, ಪ್ರಸಾದ್ ಕುಮಾರ್ ದೊಡ್ಡಡ್ಕ, ಸತೀಶ್ ಗೌಡ ದೊಡ್ಡಡ್ಕ, ರಾಮು ಸಂಟ್ಯಾರ್, ವಿಶ್ವನಾಥ ಗೌಡ ಪರನೀರು, ಕೀರ್ತನ್ ರೈ ತೊಟ್ಲ, ಭರತ್ ರೈ ಮೇರ್ಲ, ಸತೀಶ್ ರೈ ನೀರ್ಪಾಡಿ, ಪ್ರಜನ್ ರೈ ತೊಟ್ಲ, ಧನುಷ್ ಹೊಸಮನೆ, ಕಿರಣ್ ರೈ ಪುಂಡಿಕಾಯಿ, ವಿಠಲ ರೈ ಮೇರ್ಲ ಅತಿಥಿಗಳಿಗೆ ಶಾಲು ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು. ಸೀತಾರಾಮ ರೈ ಕೈಕಾರ ಸನ್ಮಾನಿತರ ಪರಿಚಯ ಮಾಡಿದರು. ಸುದೇಶ್ ರೈ ತೊಟ್ಲ, ಹರಿಣಿ ಪುತ್ತೂರಾಯ ಹಾಗೂ ಉಮೇಶ್ ಎಸ್.ಕೆ. ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ರಾಧಾಕೃಷ್ಣ ಬೋರ್ಕರ್ ವಂದಿಸಿದರು.