ಪುತ್ತೂರು: ಪುತ್ತೂರಿನ ಬೊಳ್ವಾರ್ ಹರಿಪ್ರಸಾದ್ ಹೊಟೇಲ್ ಬಳಿ ಬೃಹತ್ ಮಾವಿನ ಮರವೊಂದು ಉರುಳಿಬಿದ್ದ ಪರಿಣಾಮ ವಾಹನಗಳು ಜಖಂಗೊಂಡ ಘಟನೆ ಇಂದು ಸಂಜೆ ನಡೆದಿದೆ.

ಮಾವಿನಮರ ಬಿದ್ದ ಕ್ಷಣದಲ್ಲೇ ಮಾವಿನ ಮಿಡಿಗಾಗಿ ಮುಗಿಬಿದ್ದಿದ್ದಾರೆ. ಬೃಹತ್ ಮರಬಿದ್ದ ಪರಿಣಾಮ ತಮ್ಮ ವಾಹನವನ್ನ ಹೊರತರಲು ಪರದಾಡಿದ ವಾಹನ ಮಾಲೀಕರು ಮರದ ಕೊಂಬೆಗಳನ್ನು ಕಡಿದು ತೆರವುಗೊಳಿಸುತ್ತಿದ್ದಾರೆ.
ಮರ ಬೀಳುವ ಸಂದರ್ಭ ಯಾರೂ ಇಲ್ಲದ ಪರಿಣಾಮ ತಪ್ಪಿದ ಭಾರೀ ಅವಘಡ ತಪ್ಪಿದಂತಾಗಿದೆ.