ಏ.28: ಬಲ್ನಾಡು ಶ್ರೀ ದಂಡನಾಯಕ-ಉಳ್ಳಾಲ್ತಿ, ದೈವಗಳ ನೇಮ ನಡಾವಳಿ

ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ- ಉಳ್ಳಾಲ್ತಿ, ಹಾಗೂ ಪರಿವಾರ ದೈವಗಳ ನೇಮ ನಡಾವಳಿ ಏ.28 ಭಾನುವಾರ ರಂದು ನಡೆಯಲಿರುವುದು.

ಏ.27 ರಂದು ಬಲ್ನಾಡು ಶ್ರೀ ವಿನಾಯಕ ದೇವಸ್ಥಾನದಲ್ಲಿ ಮಧ್ಯಾಹ್ನ ಗಂಟೆ 12 :15 ರಿಂದ ಸಂಜೆ ಗಂಟೆ 6:30 ರ ವರೆಗೆ ದೇವತಾ ಪ್ರಾರ್ಥನೆ, ವಿಶೇಷ ಮಹಾಪೂಜೆ, ರಂಗಪೂಜೆ ನಡೆಯಲಿದೆ. ಶ್ರೀ ದಂಡನಾಯಕ ದೈವಸ್ಥಾನದಲ್ಲಿ ಬೆಳಿಗ್ಗೆ ಗಂಟೆ 10.30 ಕ್ಕೆ ಮಕರತೋರಣಾರೋಹಣ ರಾತ್ರಿ ಗಂಟೆ 7 ರಿಂದ ಶ್ರೀ ದೈವಗಳ ಭಂಡಾರ ತೆಗೆಯುವುದು, ತಂಬಿಲಾದಿಗಳು ನಡೆದು ಪ್ರಸಾದ ವಿತರಣೆ ಬಳಿಕ  ಅನ್ನಸಂತರ್ಪಣೆ ನಡೆಯಲಿದೆ.

ಏ.28 ರಂದು ಬೆಳಿಗ್ಗೆ 6 ರಿಂದ ಶ್ರೀ ದಂಡನಾಯಕ ದೈವದ ವಾಲಸರಿ ನೇಮ ಹಾಗೂ ಶ್ರೀ ಉಳ್ಳಾಲ್ತಿ ನೇಮ ನಡೆಯಲಿದೆ. ಮಧ್ಯಾಹ್ನ ಗಂಟೆ 12 :30 ರಿಂದ ಅನ್ನಸಂತರ್ಪಣೆ ಬಳಿಕ  2 :00 ರಿಂದ ಶ್ರೀ ಕಾಳರಾಹು ಮತ್ತು ಶ್ರೀ ಮಲರಾಯ ದೈವಗಳ ನೇಮ ನಡೆಯಲಿದೆ ಎಂದು ಶ್ರೀ ದೈವಸ್ಥಾನದ ಪ್ರಕಟಣೆ ತಿಳಿಸಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top