ಧಾರ್ಮಿಕ ಕೇಂದ್ರ ಧರ್ಮ ಶಿಕ್ಷಣ ನೀಡುವ ಕೇಂದ್ರವಾಗಬೇಕು : ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ | ದೇವಸ್ಥಾನ ಆಡಂಬರ ಭಕ್ತಿ ಪ್ರದರ್ಶನ ಕೇಂದ್ರವಾಗಬಾರದು : ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ |ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭೆ

ಪುತ್ತೂರು: ದೇವಸ್ಥಾನದ ಜೀರ್ಣೋದ್ಧಾರದ ಮೂಲಕ ನಮ್ಮ ಆತ್ಮೋದ್ದಾರದ ಕಾರ್ಯವಾಗುತ್ತಿದೆ. ಧಾರ್ಮಿಕ ಕೇಂದ್ರಗಳು ಶಿಕ್ಷಣ ನೀಡುವ ಕೇಂದ್ರವಾಗಬೇಕು. ಜನರಿಗೆ ಧಾರ್ಮಿಕ ಕೇಂದ್ರಗಳಲ್ಲಿ ಧರ್ಮ ಶಿಕ್ಷಣ ನೀಡಬೇಕಾದ ಅವಶ್ಯಕತೆಯಿದೆ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಜಿಯವರು ಹೇಳಿದರು.

ಆರ್ಯಾಪು ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಏ.25 ರಂದು ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ವಿಜ್ಞಾನದಲ್ಲಿ ಆವಿಷ್ಕಾರವಿದೆ. ಪರಿವರ್ತನೆಯೇ ವಿಜ್ಞಾನ. ಆದರೆ ಆಧ್ಯಾತ್ಮಿಕ ಅವಿಷ್ಕಾರ ಇಲ್ಲ. ಯುವಕರ ಶಕ್ತಿಯಿಂದ ಜಗತ್ತು ಬದಲಾಯಿಸಲು ಸಾಧ್ಯ. ನೂರಾರು ಧರ್ಮ ಸೇನಾನಿಗಳ ಸಹಕಾರದಿಂದ ಕಾರ್ಪಾಡಿ ಬ್ರಹ್ಮಕಲಶೋತ್ಸವದಲ್ಲಿ ಶುದ್ಧ, ಸ್ಚಚ್ಚತೆ ಕಾಪಾಡಲಾಗುತ್ತದೆ ಎಂದ ಅವರು ಯೋಗ್ಯ ಸಮರ್ಥ ನಾಯಕನ ಆಯ್ಕೆ ಮಾಡುವುದು ನಮ್ಮ ಹಕ್ಕು ಕರ್ತವ್ಯ. ಧರ್ಮ ಸಂರಕ್ಷಣೆ ಮಾಡುವ ನಾಯಕನನ್ನು ಆಯ್ಕೆ ಮಾಡುವ ಅಗತ್ಯ ಇದೆ ಎಂದು ಹೇಳಿದರು.































 
 

ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿಯವರು ಮಾತನಾಡಿ, ದೇವಸ್ಥಾನ, ಮಠ ಮಂದಿರಗಳು ಸಾಕಷ್ಟು ಬ್ರಹ್ಮಕಲಶೋತ್ಸವಗಳು ನಡೆಯುತ್ತಿದೆ. ಕೋಟ್ಯಾಂತರ ಹಣ ಬಳಕೆಯಾಗುತ್ತಿದ್ದು ಅದರ ಸದ್ಬಳಕೆಯ ಬಗ್ಗೆ ಯೋಚಿಸಬೇಕು. ದೇವಸ್ಥಾನದ ಪೂಜೆಗೆ ಸೀಮಿತವಾಗಿರದೇ ಅದು ಆಡಂಬರದಿಂದ ಭಕ್ತಿ ಪ್ರದರ್ಶನದ ಕೇಂದ್ರವಾಗಿರಬಾರದು. ದೇವಸ್ಥಾನ ದೇವರಿಗಾಗಿ ಅಲ್ಲ. ಅದು ನಮಗಾಗಿರುವುದು. ನಮ್ಮ ಮನಸ್ಸುದ್ದಿಗೆ ಬ್ರಹ್ಮಕಲಶ. ಸಕಲ ಜೀವ ಸಂಕುಲಗಳಿಗೆ ಸಮಪರ್ಕವಾಗಿ ಮುಟ್ಟುವಂತೆ ಮಾಡುವುದೇ ಬ್ರಹ್ಮಕಲಶ ಎಂದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ನ್ಯಾಯವಾದಿ ಮೋಹನ್ ಗೌಡ ಇಡ್ಯಡ್ಕ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ, ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಸಂಜೀವ ಪೂಜಾರಿ ಕೂರೇಲು ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಡಾ.ರವೀಶ್ ಪಡುಮಲೆ ಧಾರ್ಮಿಕ ಉಪನ್ಯಾಸ ನೀಡಿದರು. ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಕತ್ತಾರ ಉದ್ಯಮಿ ಮೂಡಂಬೈಲು ಡಾ.ರವಿ ಶೆಟ್ಟಿ ನೇಸರ ಕಂಪ, ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಸಂದರ್ಭೋಚಿತವಾಗಿ ಮಾತನಾಡಿದರು.

ನ್ಯಾಯವಾದಿ ಬೆಟ್ಟ ಈಶ್ವರ ಭಟ್, ಉದ್ಯಮಿ ಸೀತಾರಾಮ ರೈ ಕೆದಂಬಾಡಿ ಗುತ್ತು, ಪರಮೇಶ್ವರ ಭಟ್, ಮಣಿಯಾನ ಪುರುಷೋತ್ತಮ ಸುಬ್ರಹ್ಮಣ್ಯ ವಳಲಂಬೆ, ಜಯರಾಮ ರೈ ನುಳಿಯಾಲು, ಡಾ.ರವಿಪ್ರಕಾಶ್, ಎ.ಕೆ ಜಯರಾಮ ರೈ, ಉದ್ಯಮಿ ನಿತಿನ್ ಪಕ್ಕಳ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಾಧಾಕೃಷ್ಣ ಬೋರ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:

ದೇವಸ್ಥಾನದ ಬೆಳವಣಿಗೆಯಲ್ಲಿ ಸಹಕರಿಸಿದ ರಾಘವೇಂದ್ರ ಪುತ್ತೂರಾಯ ಹಾಗೂ ವೆಂಕಪ್ಪ ಗೌಡ ಕಾಣಿಕೆ ದೇವಸ್ಯರವರನ್ನು ಸನ್ಮಾನಿಸಲಾಯಿತು.

ಲಕ್ಷೀ, ಧನ್ಯ, ಪಾಲ್ಗುಣಿ ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಸ್ವಾಗತಿಸಿದರು. ನಿತಿನ್ ಪಕ್ಕಳ ದಂಪತಿ ಹಾಗೂ ನಾಗರಾಜ್ ನಡುಮನೆ ದಂಪತಿ ಸ್ವಾಮಿಜಿಗಳಿಗೆ ಫಲಪುಷ್ಪ ನೀಡಿ ಗೌರವಿಸಿದರು. ಉಮೇಶ್ ಎಸ್.ಕೆ ಹಾಗೂ ಹರಿಣಿ ಪುತ್ತೂರಾಯ ಕಾರ್ಯಕ್ರಮ ನಿರೂಪಿಸಿದರು.  ಸಭಾ ಕಾರ್ಯಕ್ರಮ ಸಮಿತಿ ಸಂಚಾಲಕ ಸೀತಾರಾಮ ರೈ ಕೈಕಾರ ವಂದಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top