ಬಸ್‍ ನಲ್ಲಿ ಅನ್ಯ ಕೋಮಿನ ಯುವಕನಿಂದ ಹಿಂದೂ ಯುವತಿಗೆ ಕಿರುಕುಳ | ಪ್ರಕರಣ ದಾಖಲು

ಉಪ್ಪಿನಂಗಡಿ : ಹಿಂದೂ ಯವತಿಯೊಬ್ಬರಿಗೆ ಅನ್ಯ ಕೋಮಿನ ಯುವಕನೋರ್ವ ಬಸ್ಸಿನಲ್ಲಿ ಕಿರುಕುಳ ನೀಡಿದ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತದಾನಕ್ಕೆಂದು ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ ನಲ್ಲಿ ಬರುತ್ತಿದ್ದ ಹಿಂದೂ ಯುವತಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅನ್ಯಕೋಮಿನ ಸಹಪ್ರಯಾಣಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಯುವತಿ ರಕ್ಷಣೆಗಾಗಿ ಬಸ್ ಚಾಲಕನ ಮೊರೆ ಹೋದ ವೇಳೆ ಯಾವುದೇ ಸ್ಪಂದನೆ ದೊರೆಯದಿದ್ದು, ಬಳಿಕ ಯುವತಿ ಯುವಕನ ಮೇಲೆ ಪ್ರತಿರೋಧವೊಡ್ಡಿ ಆತನಿಂದ ಆಧಾ‌ರ್ ಕಾರ್ಡ್ ಕಿತ್ತುಕೊಂಡಿದ್ದಾರೆ. ಈ ವೇಳೆ ಬಸ್ ನಿಧಾನವಾಗುತ್ತಿದ್ದಂತೆ ಯುವಕ ಬಸ್ ಕಿಟಕಿಯಿಂದ ಹೊರ ಜಿಗಿದು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಆಧಾರ್ ಕಾರ್ಡ್ ನಲ್ಲಿ ಲಾಯಿಲ ಗ್ರಾಮದ ಆದರ್ಶ ನಗರ ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಮಹಮ್ಮದ್ ಅಜೀಂ ಎಂಬ ಮಾಹಿತಿ ಇದ್ದು, ಈ ಬಗ್ಗೆ ಯುವತಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top