ಮುಳಿಯ ಜ್ಯುವೆಲ್ಸ್ ನಲ್ಲಿ ಚಿನ್ನದ ಹಬ್ಬ “ಮುಳಿಯ ಚಿನ್ನೋತ್ಸವ”ಕ್ಕೆ ಚಾಲನೆ | ಮೇ 20 ರ ತನಕ ನಡೆಯಲಿದೆ ಚಿನ್ನೋತ್ಸವ

ಪುತ್ತೂರು : ಪ್ರಸಿದ್ಧ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್ ನಲ್ಲಿ ಚಿನ್ನದ ಹಬ್ಬ “ಮುಳಿಯ ಚಿನ್ನೋತ್ಸವ”ಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಮೇ.20ರ ತನಕ ನಡೆಯುವ ಈ ಚಿನ್ನೋತ್ಸವಕ್ಕೆ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಆಫ್ ಸೈನ್ಸ್ ನ ಪ್ರೊ. ಡಾ. ಸೌಮ್ಯ ಚಾಲನೆ ನೀಡಿ, ಚಿನ್ನಾಭರಣದ ಹೊಸ ವಿನ್ಯಾಸಗಳನ್ನು ಅನಾವರಣಗೊಳಿಸಿ ಮಾತನಾಡಿ, ನನ್ನ ಸುಮಾರು 30 ವರ್ಷದ ಅನುಭವದಲ್ಲಿ ಮುಳಿಯ ಜ್ಯುವೆಲ್ಸ್ ನೊಂದಿಗೆ ಉತ್ತಮ ಸಂಬಂಧವಿದೆ. ಯಾಕೆಂದರೆ ನಮ್ಮ ಕಟುಂಬ ಸಮೇತ ಇಲ್ಲಿನ ಗ್ರಾಹಕರಾಗಿದ್ದೇವೆ. ಇದಕ್ಕೆ ಕಾರಣ ಮುಳಿಯ ನಂಬಿಕೆಯನ್ನು ಉಳಿಸಿಕೊಂಡಿದೆ. ಇದರೊಂದಿಗೆ ಪ್ರತಿಯೊಬ್ಬರಿಗೂ ನನ್ನ ಆಭರಣ ಇತರರಿಗಿಂತ ಭಿನ್ನ ಹೊಸತನ ಹೊಸ ಶೈಲಿಯಲ್ಲಿರಬೇಕೆಂಬ ಆಸೆ ಇರುತ್ತದೆ. ಅದಕ್ಕೆ ತಕ್ಕಂತೆ ಮುಳಿಯ ಜ್ಯುವೆಲ್ಸ್ ಆ ಹೊಸತನದ ಆಕಾಂಕ್ಷೆಯನ್ನು ಪೂರೈಸುತ್ತಿದೆ ಎಂದ ಅವರು ಇದರ ಜೊತೆಗೆ ಸಿಬ್ಬಂದಿಗಳ ನಗುಮೊಗದ ಸೇವೆ ನಾವು ಚಿನ್ನಾಭರಣ ನೋಡಲು ಬಂದವರು ಖರೀದಿಸುವಷ್ಟರ ಮಟ್ಟಿಗೆ ಹೋಗುತ್ತೇವೆ ಎಂದರು.

ಮುಳಿಯ ಜ್ಯುವೆಲ್ಸ್ ನ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಪ್ರಾಸ್ತಾವಿಕವಾಗಿ ಮಾತನಾಡಿ, ಉತ್ಸವಗಳನ್ನು ಪುತ್ತೂರಿಗೆ ಪರಿಚಯಿಸಿದ್ದು ಮುಳಿಯದ ವಿಶೇಷತೆ. ಹಿಂದೆ ಗ್ರಾಹಕರು ಹೊಸ ಶೈಲಿಯ ಚಿನ್ನಾಭರಣ ನೋಡುವ ಆಸೆ ಇದ್ದರೂ ಅದನ್ನು ನೋಡಲು ಬರುತ್ತಿರಲಿಲ್ಲ. ಯಾಕೆಂದರೆ ಅಲ್ಲಿಗೆ ಹೋದರೆ ಏನಾದರೂ ಒಂದು ತೆಗೆದು ಕೊಳ್ಳಬೇಕಾದಿತು ಎಂಬ ಮನೋಭಾವನೆ ಇತ್ತು. ಈ ಕುರಿತು ಅರಿತ ಮುಳಿಯ ಸಂಸ್ಥೆ 2000 ಇಸವಿಯಲ್ಲಿ ಪ್ರಥಮವಾಗಿ ವಜ್ರೋತ್ಸವ ಎಂಬ ಪ್ರದರ್ಶನವನ್ನು ಮುಳಿಯದಲ್ಲಿ ಆರಂಭಿಸಲಾಯಿತು. ಈ ಪ್ರದರ್ಶನ ಚಿನ್ನಾಭರಣ ನೋಡುವ ಗ್ರಾಹಕರಿಗೆ ಅನುಕೂಲವಾಯಿತು. ಇದೀಗ ಅದನ್ನು ಪ್ರತಿ ವರ್ಷ ಎರಡು ಬಾರಿ ಆಚರಿಸುತ್ತಾ ಬಂದಿದ್ದೇವೆ. ಈ ಚಿನ್ನೋತ್ಸವದಲ್ಲಿ ಗ್ರಾಹಕರಿಗೆ ಹೆಚ್ಚಿನ ಆಯ್ಕೆ ಸಿಗುತ್ತಿದೆ. ಸೇವೆಗಳು ಉತ್ತಮವಾಗಿರುತ್ತದೆ. ಪ್ರತಿಭಾರಿ ಹೊಸತನವನ್ನು ಪರಿಚಯಿಸುವುದು ನಮ್ಮ ವಿಶೇಷ. ಅದನ್ನು ಈ ಭಾರಿಯೂ ಮಾಡಿದ್ದೇವೆ. ಈ ಬಾರಿಯೂ 4 ವಿಶೇಷ ಹೊಸ ಶೈಲಿಯ ಆಭರಣವನ್ನು ಗ್ರಾಹಕರಿಗೆ ಪರಿಚಯ ಮಾಡಲಿದ್ದೇವೆ. ಹಾಗಾಗಿ ಗ್ರಾಹಕರು ಈ ಚಿನ್ನೋತ್ಸವದ ಪ್ರಯೋಜನವನ್ನು ಪಡೆಯುವಂತೆ ವಿನಂತಿಸಿದರು.



































 
 

ವೇದಿಕೆಯಲ್ಲಿ ಮುಳಿಯ ಸಂಸ್ಥೆಯ ನಿರ್ದೇಶಕಿ ಅಶ್ವಿನಿ ಕೃಷ್ಣ ಉಪಸ್ಥಿತರಿದ್ದರು. ಸೌಮ್ಯ ಅತಿಥಿಯನ್ನು ಗೌರವಿಸಿದರು. ಪೂಜಿತಾ ಪ್ರಾರ್ಥಿಸಿದರು. ಸಹಪ್ರಬಂಧಕ ಯತೀಶ್ ಸ್ವಾಗತಿಸಿದರು. ಪ್ಲೋರ್ ಮೆನೇಜರ್ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು. ಆನಂದ ಕುಲಾಲ್ ವಂದಿಸಿದರು. ಪ್ರಬಂಧಕ ರಾಘವೇಂದ್ರ ಪಾಟೀಲ್, ಪ್ರೊಡಕ್ಸ್ ಮೆನೇಜರ್ ಪ್ರಶಾಂತ್, ಮಾರುಕಟ್ಟೆ ಪ್ರಬಂಧಕ ಸಂಜೀವ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಿಬ್ಬಂದಿ ಮಹೇಂದ್ರ ಸಹಕರಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top