ಕಾರವಾರ: ಒಂದೇ ಕುಟುಂಬದ ಆರು ಮಂದಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಅಕ್ವಾಡ ಗ್ರಾಮದ ಬಳಿ ಕಾಳಿ ನದಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಈಶ್ವರ ನಗರದ ನಿವಾಸಿಗಳಾದ ನಝೀರ್ ಅಹ್ಮದ್ (40), ರೇಷಾ ಉನ್ನಿಸಾ (38), ಇಫ್ರಾ ಅಹ್ಮದ್ (15), ಅಬೀದ್ ಅಹ್ಮದ್(12), ಅಲ್ಲೀಯಾ ಅಹ್ಮದ್ (10) ಹಾಗೂ ಮೋಹಿನ್ (6) ಮೃತಪಟ್ಟ ಒಂದೇ ಕುಟುಂಬದವರು.
ಮೃತರು ಪ್ರವಾಸಕ್ಕೆ ತೆರಳಿದ್ದಾಗ ಅಹ್ಮದ್ ಕುಟುಂಬ ಊಟ ಮಾಡಿ ಕಾಳಿ ನದಿ ದಡದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ 6 ವರ್ಷದ ಮೋಹಿನ್ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದು, ಮಗುವನ್ನು ರಕ್ಷಿಸಲು ಒಬ್ಬರ ಹಿಂದೆ ಒಬ್ಬರು ಹೋಗಿ 6 ಜನರು ಮೃತಪಟ್ಟಿದ್ದಾರೆ.
ನದಿಯಿಂದ ಆರು ಮೃತದೇಹಗಳನ್ನು ಹೊರತೆಗೆಯಲಾಗಿದೆ. ದಾಂಡೇಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.