“ನಮ್ಮ ನಡೆ ಮತಗಟ್ಟೆ ಕಡೆ” ಜಾಗೃತಿ ಅಭಿಯಾನಕ್ಕೆ ಚಾಲನೆ | ವಿವಿಧ ಮತಗಟ್ಟೆಗಳಲ್ಲಿ ಧ್ವಜಾರೋಹಣ

ಪುತ್ತೂರು: ಮತದಾರರಿಗೆ ಮತಗಟ್ಟೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ʼನಮ್ಮ ನಡೆ ಮತಗಟ್ಟೆ ಕಡೆʼ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಮತದಾನವಾಗಬೇಕೆಂಬ ಆಶಯ ಹೊಂದಿದೆ. 206 ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ 221 ಮತಗಟ್ಟೆಗಳಲ್ಲಿಯೂ ಈ ಕಾರ್ಯಕ್ರಮ ನಡೆದಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಹನಮ ರೆಡ್ಡಿ ಹೇಳಿದರು.

ಅವರು ಇಂದು ಆಡಳಿತ ಸೌಧದ ಮುಂದೆ ಭಾರತ ಚುನಾವಣಾ ಆಯೋಗ, ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್‌ ಸಮಿತಿ, ಪುತ್ತೂರು ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಪುತ್ತೂರು ನಗರಸಭೆ ಸಂಯುಕ್ತ ಆಶ್ರಯದಲ್ಲಿ “ನಮ್ಮ ನಡೆ ಮತಗಟ್ಟೆ ಕಡೆ” ಜಾಗೃತಿ ಅಭಿಯಾನ ಹಾಗೂ ಧ್ವಜಾರೋಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಗರ ಸಭೆ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 119 ರಲ್ಲಿ ನಗರ ಸಭೆ ಪೌರಾಯುಕ್ತ ಬದ್ರುದ್ದಿನ್‌ ಧ್ವಜಾರೋಹಣ ನೆರೆವೇರಿಸಿದರು. ಮತಗಟ್ಟೆ ಸಂಖ್ಯೆ 120ರಲ್ಲಿ  ಕಾರ್ಯನಿರ್ವಾಹಕ ಅಧಿಕಾರಿ‌ ಹನಮ ರೆಡ್ಡಿ ಧ್ವಜಾರೋಹಣಗೈದರು. ಸಂಜೀವಿನಿ ಒಕ್ಕೂಟದ ಸದಸ್ಯರು ಮತಗಟ್ಟೆ ಎದುರು ರೂಪಿಸಿದ ರಂಗೋಲಿ  ಚಿತ್ತಾಕರ್ಷಕವಾಗಿತ್ತು.





























 
 

ತಾಲೂಕು ಆಡಳಿತ ಸೌಧದಿಂದ ಕಾಲ್ನಡಿಗೆ ಜಾಥಾ ಮೂಲಕ ಭಾರತ ಚುನಾವಣಾ ಆಯೋಗದ ʼನಾ ಭಾರತʼ ಗೀತೆಯನ್ನು ವಾಹನದ ಧ್ವನಿವರ್ಧಕ ದ ಮೂಲಕ ಪ್ರಚಾರಪಡಿಸುತ್ತಾ ಮತಗಟ್ಟೆಗಳಿಗೆ ಸಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಬಳಿಕ ಮತಗಟ್ಟೆ ಸುತ್ತ ಸ್ವಚ್ಛತೆ ಮಾಡಲಾಯಿತು. ನೈತಿಕ ಚುನಾವಣೆಯ ಕುರಿತು ಮತದಾರರಿಗೆ ಭಿತ್ತಿಪತ್ರಗಳನ್ನು ವಿತರಿಸಲಾಯಿತು.

ಈ ಸಂದರ್ಭ ತಾ.ಪಂ. ಸಹಾಯಕ ನಿರ್ದೇಶಕಿ ಶೈಲಜ ಎ., ಪ್ರಧಾನ ಮಂತ್ರಿ ಪೋಷಣ್‌ ಅಭಿಯಾನದ ಸಹಾಯಕ ನಿರ್ದೇಶಕ ವಿಷ್ಣು ಪ್ರಸಾದ್‌, ಸಾಮಾಜಿಕ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ, ಉಪತಹಶೀಲ್ದಾರ್‌ ಸುಲೋಚನಾ, ತಾ.ಪಂ. ವ್ಯವಸ್ಥಾಪಕ ಜಯಪ್ರಕಾಶ್‌, ತಾ.ಪಂ. ಪ್ರವೀಣ್‌ ಕುಮಾರ್‌, ತುಳಸಿ,  ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು, ಮತಗಟ್ಟೆ ಮಟ್ಟದ ಅಧಿಕಾರಿಗಳು ಹಾಗೂ ನಾಗರಿಕರು ಭಾಗವಹಿಸಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top