ಕಾರಿನಲ್ಲಿ ಸಾಗಿಸುತ್ತಿದ್ದ ಒಂದು ಕೆಜಿ ಚಿನ್ನ ವಶ !

ಕೋಟ: ಕೇರಳದಿಂದ ಕಾರಿನಲ್ಲಿ ಒಂದು ಕೆ.ಜಿ.ಗೂ ಅಧಿಕ ಚಿನ್ನ ಸಾಗಿಸುತ್ತಿದ್ದ ಪ್ರಕರಣ ಪತ್ತೆಹಚ್ಚಿದ ಪೊಲೀಸರು ಚಿನ್ನ ವಶಪಡಿಸಿಕೊಂಡಿದ್ದಾರೆ.

ಕೋಟ ಮೂರುಕೈನಲ್ಲಿ ಅನುಮಾಸ್ಪದವಾಗಿ ಕಾರಿನಲ್ಲಿ ಕೇರಳದಿಂದ ಕುಂದಾಪುರದ ಕಡೆ ಸಾಗಿಸುತ್ತಿದ್ದ 1.200 ಕೆಜಿ ಚಿನ್ನವನ್ನು ಕೋಟ ಪೋಲಿಸರು ವಶಪಡಿಸಿಕೊಂಡಿದ್ದಾರೆ.   

ಕೇರಳದ ಚಿತ್ರ ನಿರ್ಮಾಪಕರೊಬ್ಬರ ಮನೆಯಿಂದ ಕದ್ದ ಚಿನ್ನ ಎಂದು ಶಂಕಿಸಲಾಗಿದ್ದು, ಇದನ್ನು ಬಿಹಾರಕ್ಕೆ ಸಾಗಿಸುವ ಯತ್ನದಲ್ಲಿದ್ದ ಆರೋಪಿಗಳ ಕುರಿತು ಮಾಹಿತಿ ತಿಳಿದ ಕೋಟ ಪೋಲಿಸ್ ಆರೋಪಿಗಳನ್ನು ಬಂದಿಸಿದ್ದಾರೆ. ಕೋಟ ಠಾಣೆಯಲ್ಲಿ ಉನ್ನತ ಮಟ್ಟದ ಪೋಲಿಸ್ ಅಧಿಕಾರಿಗಳು ಆಗಮಿಸಿ, ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top