ಕೊಳೆತ ಸ್ಥಿತಿಯಲ್ಲಿ ಮನುಷ್ಯನ ತಲೆಬುರುಡೆ ಪತ್ತೆ !

ಕಡಬ: ಮನುಷ್ಯನ ತಲೆಬುರುಡೆಯೊಂದು ಕೊಳೆತ ಸ್ಥಿತಿಯಲ್ಲಿ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಹಳೆ ನರ್ಸರಿ ಬಳಿ, ಸುಬ್ರಮಣ್ಯ-ಉಪ್ಪಿನಂಗಡಿ ರಾಜ್ಯಹೆದ್ದಾರಿಯ ಪಕ್ಕದಲ್ಲಿರುವ ರಕ್ಷಿತಾರಣ್ಯದಲ್ಲಿ ಪತ್ತೆಯಾಗಿದೆ.

ಬಿಳಿನೆಲೆ ಗ್ರಾಮ ನಿವಾಸಿ ಚಂದ್ರಶೇಖರ್ ಎಂಬವರು ಏ.19 ರಂದು ಬೆಳಿಗ್ಗೆ ನೆರೆ-ಕೆರೆಯ ನಿವಾಸಿಗಳೊಂದಿಗೆ, ಕಾಡಿನಲ್ಲಿ ಕಟ್ಟಿಗೆ ಯನ್ನು ತರಲು ಕಡಬ ತಾಲೂಕು ಬಿಳಿನೆಲೆ ಗ್ರಾಮದ ಹಳೆ ನರ್ಸರಿ ಬಳಿ, ಸುಬ್ರಮಣ್ಯ-ಉಪ್ಪಿನಂಗಡಿ ರಾಜ್ಯಹೆದ್ದಾರಿಯ ಪಕ್ಕದಲ್ಲಿರುವ ರಕ್ಷಿತಾರಣ್ಯದಲ್ಲಿ ತೆರಳುತ್ತಿದ್ದಾಗ, ದಾರಿಯ ಬದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮನುಷ್ಯನ ತಲೆಬುರುಡೆ ಹಾಗು ಬ್ಯಾಗ್ ಕಂಡುಬಂದಿದೆ. ಸ್ವಲ್ಪ ದೂರದಲ್ಲಿ ಮರವೊಂದರಲ್ಲಿ ಬಟ್ಟೆಯೊಂದು ಮರದ ಕೊಂಬೆಯಿಂದ ನೇತಾಡುತ್ತಿರುವುದು ಕಂಡುಬಂದಿದೆ.

ಈ ಕುರಿತು ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top