ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನ ವೀರಮಂಗಲ ಕುಮಾರಧಾರ ಹೊಳೆಯಲ್ಲಿ ಅತ್ಯಂತ ವೈಭವದಿಂದ ಇಂದು ಮುಂಜಾನೆ ನಡೆಯಿತು.

ಗುರುವಾರ ಸಂಜೆ ಶ್ರೀ ದೇವಸ್ಥಾನದಲ್ಲಿ ಬಲಿ ಉತ್ಸವ ನಡೆದು ಬಳಿಕ ರಕ್ತೇಶ್ವರಿ ದೈವದೊಂದಿಗೆ ಮಾತುಕತೆ ನಡೆದು ನಂತರ ಹೊರಟ ಶ್ರೀ ದೇವರು ನೂರಾರು ಕಟ್ಟೆಗಳಲ್ಲಿ ಪೂಜೆಗೊಂಡು ದೂರದ ವೀರಮಂಗಲವನ್ನು ಇಂದು ಮುಂಜಾನೆ ತಲುಪಿದರು.

ಅಲ್ಲಿ ಇಂದು ಮುಂಜಾನೆ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಅವಭೃತ ಸ್ನಾನ ಮುಗಿಸಿ ಕಟ್ಟೆಪೂಜೆ ಗೊಂಡು ಪುನಃ ಹಿಂತಿರುಗಿದರು.