ಸಂತ ಫಿಲೋಮಿನಾ ಕಾಲೇಜಿನಲ್ಲಿ “ಇಂಪ್ಯಾಕ್ಟ್‌ ಲೆಕ್ಚರ್‌” ಸರಣಿಯ ದ್ವಿತೀಯ ಉಪನ್ಯಾಸ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಇನ್ಸ್ಟಿಟ್ಯೂಶನಲ್‌ ಇನ್ನೊವೇಶನ್‌ ಕೌನ್ಸಿಲ್‌ (ಐಐಸಿ), ಗಣಕ ವಿಜ್ಞಾನ  ಹಾಗೂ ಎಂಕಾಂ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಭಾಭವನದಲ್ಲಿ “ಇಂಪ್ಯಾಕ್ಟ್‌ ಲೆಕ್ಚರ್‌” ಸರಣಿ ದ್ವಿತೀಯ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಯಿತು.

ಮಂಗಳೂರಿನ ಗ್ಲೋಟಚ್‌ ಟೆಕ್ನಾಲಜೀಸ್‌ ಸಂಸ್ಥೆಯ   ಅಪ್ಲಿಕೇಶನ್‌ ಡೆವಲಪ್‌ಮೆಂಟ್‌ ವಿಭಾಗದ ನಿರ್ದೇಶಕ ದೀಪಕ್‌ ಕೃಷ್ಣಮೂರ್ತಿ ಡಿಸ್ರಪ್ಟಿವ್‌ ಇನ್ನೊವೇಶನ್‌: ಟ್ರಾನ್ಸ್ಫಾರ್ಮಿಂಗ್‌ ಇಂಡಸ್ಟ್ರೀಸ್‌ ಥ್ರೂ ಕ್ರಿಯೇಟಿವ್‌ ಐಡಿಯೇಶನ್‌ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ, 90 ರ ದಶಕದದಲ್ಲಿ ಕ್ಲೇಟನ್ ಕ್ರಿಸ್ಟೇನ್‌ಸೆನ್‌ನಿಂದ ಮೊದಲ ಬಾರಿಗೆ ಪರಿಚಯಿಸಲ್ಪಟ್ಟ ಡಿಸ್ರಪ್ಟಿವ್‌ ಇನ್ನೊವೇಶನ್‌ ಎಂಬ ಪದವು ನಂತರ ಸೈದ್ಧಾಂತಿಕ ಪರಿಕಲ್ಪನೆಯಿಂದ ಕಂಪನಿಗಳು ಮತ್ತು ದೇಶಗಳಿಗೆ ಸಮಾನವಾಗಿ  ಮಾರ್ಗದರ್ಶಿ ತತ್ವವಾಗಿ ರೂಪಾಂತರಗೊಂಡಿದೆ. ಡಿಸ್ರಪ್ಟಿವ್‌ ಇನ್ನೊವೇಶನ್‌ ಒಂದು ವಲಯ ಅಥವಾ ಉದ್ಯಮದ ಕಾರ್ಯಗಳನ್ನು ಗಮನಾರ್ಹವಾಗಿ ಬದಲಾಯಿಸುವ ಅಂಶವಾಗಿದೆ. ಡಿಸ್ರಪ್ಟಿವ್‌ ಇನ್ನೊವೇಶನ್‌ ನ್ನು ಬಳಸಿಕೊಳ್ಳಲು ನೋಡುತ್ತಿರುವ ಕೈಗಾರಿಕೆಗಳಿಗೆ ಪ್ರಯೋಗದ ಸಂಸ್ಕೃತಿಯನ್ನು ಪ್ರೋತ್ಸಾಹಿಸುವುದು, ಗ್ರಾಹಕ-ಕೇಂದ್ರಿತ ವ್ಯವಹಾರ, ಮತ್ತು ಸಹಯೋಗ ಎಂಬ ಮೂರು ಅಂಶಗಳು ನಿರ್ಣಾಯಕವಾಗಿವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿರಬೇಕು.  ಕ್ರಿಯಾಶಿಲತೆ ಮತ್ತು ನಾವೀನ್ಯತೆಗಳು ಉದ್ಯಮದ ಯಶಸ್ಸಿಗೆ ಕಾರಣೀಭೂತವಾದ ಅಂಶಗಳಾಗಿವೆ. ಹೊಸ ಪರಿಕಲ್ಪನೆಗಳು ಹಲವಾರು ಸಂಸ್ಥೆಗಳನ್ನು ಯಶಸ್ಸಿನ ಉತ್ತುಂಗಕ್ಕೇರಿಸಿವೆ. ವಿದ್ಯಾರ್ಥಿಗಳು ಕ್ರಿಯಾತ್ಮಕ ಚಿಂತನೆ ಹಾಗೂ ಆವಿಷ್ಕಾರ ಮನೋಭವಗಳನ್ನು ಹೊಂದಿರಬೇಕು ಎಂದರು.



































 
 

ಎಂ.ಕಾಂ ವಿಭಾಗದ ವಿದ್ಯಾರ್ಥಿನಿಯರಾದ ಶ್ರೀರಾಗಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಗಣಕ ವಿಜ್ಞಾನ ವಿಭಾಗದ ಡೀನ್‌ ವಿನಯಚಂದ್ರ ಸ್ವಾಗತಿಸಿದರು. ಐಐಸಿ ಘಟಕದ ನಿರ್ದೇಶಕ ಗೀತಾ ಪೂರ್ಣಿಮಾ ವಂದಿಸಿದರು. ಉಪನ್ಯಾಸಕಿ ಸ್ಬಾತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಐಐಸಿ ಘಟಕದ ಸಂಯೋಜಕ ಅಭಿಷೇಕ್‌ ಸುವರ್ಣ, ಎಂಕಾಂ ಕಾರ್ಯಕ್ರಮದ ಸಂಯೋಜಕ ಹರ್ಷಿತ್‌ ಆರ್‌. ವೇದಿಕೆಯಲ್ಲಿ ಉಪಸ್ಥಿತರಿದ್ದರು. ತೃತೀಯ ಬಿಸಿಎಯ ಅಭಿಷೇಕ್‌ ಕಾಮತ್‌, ಅನುಶ್‌ ಸಹಕಾರ ನೀಡಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top