ನದಿಯಲ್ಲಿ ಮುಳುಗಿ ಓರ್ವ ಮೃತ್ಯು !

ಸುಳ್ಯ: ನೀರಿನಲ್ಲಿ ಮುಳುಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಂಡೆಕೋಲು ಗ್ರಾಮ ಮುರೂರು ಸಮೀಪ ಪರಪ್ಪ ನದಿಯಲ್ಲಿ ನಡೆದಿದೆ.

ಈಶ್ವರಮಂಗಲ ಪ್ರವೀಣ್ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಈಶ್ವರಮಂಗಲದ ನಾಲ್ಕು ಜನ ಮುರೂರು ಸಮೀಪ ಪರಪ್ಪ ಹೊಳೆಗೆ ಮೀನು ಹಿಡಿಯಲು ಬಂದಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ನಾಲ್ವರಲ್ಲಿ ಒಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.  ಮೃತಪಟ್ಟ ವ್ಯಕ್ತಿ ಮೃತದೇಹವನ್ನು ಪೈಚಾರ್ ಮುಳುಗು ತಜ್ಞರ ತಂಡದವರು ನದಿಯಿಂದ ಮೇಲೆತ್ತಿ ಸುಳ್ಯ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಸುಳ್ಯ ಪೋಲಿಸ್ ಸ್ಥಳ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top