ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ವೈಭವದಿಂದ ನಡೆಯುತ್ತಿದ್ದು, ಮಂಗಳವಾರ ತಡರಾತ್ರಿ ದೂರದ ಬಲ್ನಾಡಿನಿಂದ ಶ್ರೀ ದಂಡನಾಯಕ- ಉಳ್ಳಾಲ್ತಿ ದೈವಗಳ ಮಾಮೂಲು ಪ್ರಕಾರ ಕಿರುವಾಳು ಶ್ರೀ ದೇವಸ್ಥಾನಕ್ಕೆ ಆಗಮಿಸಿತು.

ಬಲ್ನಾಡಿನ ಶ್ರೀ ದೈವಸ್ಥಾನದಿಂದ ಸೂಟೆಗಳೊಂದಿಗೆ ಭಂಡಾರ ಸಹಿತ ಶ್ರೀ ದಂಡನಾಯಕ-ಉಳ್ಳಾಲ್ತಿ ವಗೈರೆ ದೈವಗಳು ಆಗಮಿಸಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹೊರಾಂಗಣದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರನ್ನು ಎದುರುಗೊಂಡು ಬಲಿ ಉತ್ಸವ ನಡೆಯಿತು. ಅಲ್ಲಿ ದೈವ-ದೇವರುಗಳ ನುಡಿಗಟ್ಟು ಮುಗಿದು ಬಳಿಕ ಶ್ರೀ ದೈವಗಳು ಒಳಾಂಗಣ ಪ್ರವೇಶಿಸಿದವು.

ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಲಕ್ಷಾಂತರ ಭಕ್ತಾದಿಗಳು ಈ ಕ್ಷಣಗಳನ್ನು ನೋಡಿ ಪುನೀತರಾದರು.

ಬಳಿಕ ಪಲ್ಲಕ್ಕಿ ಉತ್ಸವ, ಸಣ್ಣ ರಥೋತ್ಸವ, ಕೆರೆಆಯನ, ತೆಪ್ಪೋತ್ಸವ ಜರಗಿತು.