ಸೇತುವೆ ಕಾಮಗಾರಿ ವೇಳೆ ಕುಸಿತ : ಇಬ್ಬರು ಸಣ್ಣಪುಟ್ಟ ಗಾಯಗಳಿಂದ ಪಾರು

ಪುಣಚ: ಸೇತುವೆ ಕಾಮಗಾರಿ ನಡೆಯುತ್ತಿದ್ದ ವೇಳೆ ಸೇತುವೆ ಕುಸಿದು ಇಬ್ಬರು ಸಣ್ಣಪುಟ್ಟ ಗಾಯಗೊಂಡು ಅಪಾಯದಿಂದ ಪಾರಾದ ಘಟನೆ ವಿಟ್ಲ ಪುಣಚದ ಬರೆಂಜ ಎಂಬಲ್ಲಿ ಇಂದು ನಡೆದಿದೆ.

ಗಾಯಗೊಂಡವರನ್ನು ಆಸ್ಪತ್ರೆಗೆ ಕರೊದೊಯ್ದು ಚಿಕಿತ್ಸೆ ನೀಡಲಾಗಿದೆ.

ಬರೆಂಜ-ಕುರುಡುಕಟ್ಟೆ ಸಂಪರ್ಕ ರಸ್ತೆಗೆ ನೂತನ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಸೇತುವೆ ಕುಸಿದಿದೆ. ಈ ಸಂದರ್ಭ ಇಬ್ಬರು ಸೇತುವೆ ಕೆಳಗೆ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಇಬ್ಬರು ಗಾಯಗೊಂಡರೆನ್ನಲಾಗಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top