ಮೀನು ಹಿಡಿಯಲು ಹೊಳೆಗೆ ಇಳಿದ ಮಹಿಳೆ ಮೃತ್ಯು

ಉಡುಪಿ : ಸಿಗಡಿ ಮೀನು ಹಿಡಿಯಲು ಹೊಳೆಗೆ ಇಳಿದ ಮಹಿಳೆ ಮುಳುಗಿ ಮೃತಪಟ್ಟ ಘಟನೆ ಕುಂದಾಪುರದ ಕೋಣಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಕುಂದಾಪುರ ಕೋಣಿ ಗ್ರಾಮದ ವನಜ ಮೃತ ದುರ್ದೈವಿ.

ವನಜ ಎಂದಿನಂತೆ ಸಿಗಡಿ ಮೀನು ಹಿಡಿಯಲು ಕೋಣಿಯ ಮಲ್ಲನಬೆಟ್ಟು ಹೊಳೆಗೆ ಹೋಗಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿದ್ದಾರೆ. ಬಳಿಕ ವನಜಾ ಅವರ ಪತಿ ವಾಸು ಹಾಗೂ ಸ್ಥಳೀಯರು ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅದಾಗಲೇ ವೈದ್ಯರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top