ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪೇಟೆ ಸವಾರಿ ಹಾಗೂ ಕಟ್ಟೆ ಪೂಜೆ ಪ್ರಯುಕ್ತ ದರ್ಬೆ ಶ್ರೀ ಮಂಜುನಾಥೇಶ್ವರ ಇಲೆಕ್ಟ್ರೋನಿಕ್ಸ್ & ಫರ್ನೀಚರ್ಸ್ ಪ್ರಸ್ತುತಪಡಿಸುವ “ಪುತ್ತೂರ ಹಬ್ಬ” ಎಂಬ ಬೃಹತ್ ಮನರಂಜನಾ ಕಾರ್ಯಕ್ರಮವನ್ನು ಏ.15 ಸೋಮವಾರ ಸಂಜೆ 6.30ರಿಂದ ಟೈಮ್ & ಟೈಡ್ ಇವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆಆಯೋಜಿಸಲಿದೆ.
ಪುತ್ತೂರು ನಗರದ ಇತಿಹಾಸದಲ್ಲಿಯೇ ಬೃಹತ್ ಮಟ್ಟದ ಪ್ರಥಮ ಕಾರ್ಯಕ್ರಮ ಇದಾಗಿದ್ದು, ಪುತ್ತೂರಿನ ಬನ್ನೂರು ಜೋಡುಕಟ್ಟೆ ಮೈದಾನದಲ್ಲಿ ಜರಗಲಿದೆ.
ತಾರಾಕರ್ಷಣೆ: ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್ ಹಾಗೂ ತುಳು ಚಿತ್ರರಂಗದ ಜನಪ್ರಿಯ ನಟ , ನಟಿಯರು ಸೇರಿದಂತೆ ಹಲವು ಪ್ರತಿಭಾವಂತ ಯುವ ಗಾಯಕ, ಗಾಯಕಿಯರು ಭಾಗವಹಿಸಲಿದ್ದು, ಲೈವ್ ಕಾನ್ಸರ್ಟ್, ನೃತ್ಯ, ಹಾಡುಗಳು ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ.
ಭಾಗವಹಿಸುವ ಪ್ರಮುಖರು : ಚಲನಚಿತ್ರ ನಟ-ನಟಿಯರಾದ ನವರಸ ರಾಜೆ ಬೋಜರಾಜ ವಾಮಂಜೂರ್, ವಿನೀತ್‌ಕುಮಾರ್, ಸಮತಾ ಅಮೀನ್, ಚೇತನ್‌ರೈ ಮಾಣಿ, ಬಿ. ವೆನ್ಯ ರೈ ಭಾಗವಹಿಸಲಿದ್ದಾರೆ.
ಹಾಡುಗಾರರು: ಪ್ರಸಿದ್ದ ಚಲನಚಿತ್ರ ಹಿನ್ನಲೆ ಗಾಯಕ, ಗಾಯಕಿಯರಾದ ಅಜಯ್‌ವಾರಿಯರ್, ಸುಬ್ರತ್‌ಸಾಹು, ಸಾಕ್ಷಿ ಭಾಗವತ್, ಪೃಥ್ವಿ ಭಟ್ ಹಾಗೂ ಪುತ್ತೂರಿನ ಉದಯೊನ್ಮುಕ ಕಲಾವಿದರಾದ ಕವಿತಾ ದಿನಕರ್, ಮಹೇಶ್ ಪುತ್ತೂರು ಹಾಗೂ ಅಲ್ತಾಫ್ ಪುತ್ತೂರು ಹಾಡುಗಳ ಮೂಲಕ ಪ್ರೇಕ್ಷಕರನ್ನು ಮನರಂಜಿಸಲಿದ್ದಾರೆ.
ಕುಮಾರಿ ಜ್ಞಾನ ರೈ ಕುರಿಯ ಇವರಿಂದ ಅದ್ಬುತ ಭರತನಾಟ್ಯ, ಸ್ವಾಗತ ನೃತ್ಯ ಅಲ್ಲದೆ ಕರ್ನಾಟಕದ ಪ್ರಸಿದ್ದ ನೃತ್ಯ ತಂಡ ಹೆಜ್ಜೆನಾದ ಕುಮಾರಿ ಜ್ಞಾನ ಐತಾಳರ ಸಾರಥ್ಯದಲ್ಲಿ ಅತ್ಯದ್ಬುತ ನ್ರತ್ಯ ಪ್ರದರ್ಶನ ಹಾಗೂ ನ್ರತ್ಯ ಸಂಯೋಜನೆ ಮೂಡಿಬರಲಿದೆ. ಯುವ ಪ್ರತಿಭೆ ಮಾ.ಸಾನ್ವಿತ್ ಎಸ್. ಹೆಗ್ಡೆ ಅವರಿಂದ ಅದ್ಬುತ ಹುಲಿವೇಷ ಪ್ರದರ್ಶನ ನಡೆಯಲಿದೆ.
ಕಾರ್ಯಕ್ರಮವನ್ನು ಪ್ರಸಿದ್ಧ ರೆಡ್.ಎಫ್.ಎಂ. ರೇಡಿಯೋ ಜಾಕಿ, ಟಿವಿ ನಿರೂಪಕ ಹಾಗೂ ಪ್ರಖ್ಯಾತ ಕಾರ್ಯಕ್ರಮ ನಿರೂಪಕ ಆರ್.ಜೆ ಪ್ರಸನ್ನ ಮತ್ತು ಮುರಳೀಧರ್ ಜೆ. ಭಾರದ್ವಾಜ್ ಪುತ್ತೂರು ಹಬ್ಬ ಕಾರ್ಯಕ್ರಮದ ನಿರೂಪಕರಾಗಿರುತ್ತಾರೆ.
ಅಲ್ಲದೆ ದೇಶ ವಿದೇಶಗಳಲ್ಲಿ ಐದು ಸಾವಿರಕ್ಕೂ ಮಿಕ್ಕಿ ಪ್ರದರ್ಶನ ನೀಡಿದ ಸಂಗೀತ ತಂಡವಾದ ಸ್ರ್ಟಿಂಗ್ಸ್ ಇದರ ಮುಖ್ಯ ರುವಾರಿ ರಾಜ್‌ಗೋಪಾಲ್ ಕೆ ಮತ್ತು ಸಂಗಡಿಗರಿಂದ ಸಂಗೀತದ ರಸದೌತಣ ಈ ಕಾರ್ಯಕ್ರಮದ ವಿಶೇಷತೆಯಾಗಿದೆ.
ಸುಮಾರು 10,000 ಕಲಾರಸಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಅತ್ಯಾಧುನಿಕ ವೇದಿಕೆ, ದ್ವನಿ ಮತ್ತು ಬೆಳಕು ಹಾಗೂ ಎಲ್.ಇ.ಡಿ ಬ್ಯಾಕ್‌ಡ್ರಾಪ್, ಪೈರೋ ಟೆಕ್ನಿಕ್ ಸ್ಪೆಷಲ್ ಎಫೆಕ್ಟ್ ಇನ್ನಿತರ ವಿಶೇಷತೆಗಳು ಕಾರ್ಯಕ್ರಮವನ್ನು ಮತ್ತಷ್ಟೂ ಚಂದಗಾಣಿಸಲಿದೆ.
ಪುತ್ತೂರ ಹಬ್ಬದ ಸಂಪೂರ್ಣ ಕಾರ್ಯಕ್ರಮವು ಪ್ರಸಿದ್ದ ಯೂಟ್ಯುಬ್ ಚಾನಲ್‌ಗಳಲ್ಲಿ ನೇರಪ್ರಸಾರಗೊಳ್ಳಲಿದೆ.
ಕರಾವಳಿ ಕರ್ನಾಟಕ ಹಾಗೂ ಪುತ್ತೂರಿನ ಕಲಾರಸಿಕರು ಮತ್ತು ಗ್ರಾಹಕರು ಬೆಂಬಲ ಸೂಚಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಟೈಮ್ & ಟೈಡ್ ಸಂಸ್ಥೆಯ ಸಂಸ್ಥಾಪಕ, ಕಾರ್ಯಕಾರಿ ನಿರ್ದೇಶಕರಾದ ಸುರೇಶ್ ರಾವ್ ಕೊಕ್ಕಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಾರ್ಕಿಂಗ್: ಈ ಕಾರ್ಯಕ್ರಮಕ್ಕೆ ವಿ.ಐ.ಪಿ ಪಾಸ್‌ಪಡೆಕೊಂಡವರು ಜೋಡುಕಟ್ಟೆ ಮೈದಾನದ ಸಮೀಪದಲ್ಲಿರುವ ಕೋಟೆಸೈಟ್, ಆರ್.ಟಿ.ಒ ಕ್ಯಾಂಪಸ್, ಮೆಸ್ಕಾಂ ಕ್ಯಾಂಪಸ್ ನಲ್ಲಿ ಭದ್ರತಾ ವ್ಯವಸ್ಥೆಯೊಂದಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ವಿಶೇಷ ಪ್ರಕಟನೆ:
ಎ.18 ಗುರುವಾರ ಮುಕ್ರಂಪಾಡಿಯ ಹನುಮವಿಹಾರ ಮೈದಾನದಲ್ಲಿ ಜರಗಬೇಕಿದ್ದ ಪುತ್ತೂರ ಹಬ್ಬ ಬೃಹತ್ ಮನೋರಂಜನಾ ಕಾರ್ಯಕ್ರಮವು ಕಾರಣಾಂತರಗಳಿಂದ ಮೇ ತಿಂಗಳಲ್ಲಿ ಅಯೋಜಿಸಲಾಗುವುದು. ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಮುಂದಿನ ಈ ಬ್ರಹತ್ ಪುತ್ತೂರ ಹಬ್ಬ ಕಾರ್ಯಕ್ರಮಕ್ಕೆ ಪುತ್ತೂರಿನ ನಾಗರೀಕರು, ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳು, ಸಂಘ ಸಂಸ್ಥೆಗಳು ಅಲ್ಲದೆ ಎಂ.ಎನ್.ಸಿ ಬ್ರಾಂಡ್‌ಗಳು ಟೈಮ್& ಟೈಡ್‌ಸಂಸ್ಥೆಗೆ ಸಾಥ್ ನೀಡಿ ಪ್ರೋತ್ಸಾಹಿಸಬೇಕಾಗಿ ವಿನಂತಿ ಟೈಮ್ & ಟೈಡ್ ನ ಸುರೇಶ್‌ರಾವ್‌ಕೊಕ್ಕಡ ವಿನಂತಿಸಿದ್ದಾರೆ.