ಕಡಬ : ಕಡಬದಲ್ಲಿ ಜರಗುವ ಏಕಾಹ ಭಜನಾ ಮಹೋತ್ಸವ ಜಿಲ್ಲೆಯಲ್ಲಿಯೇ ವಿಶಿಷ್ಟ ಸ್ಥಾನ ಪಡೆದಿದೆ. ಊರ ಜಾತ್ರೆಯಂತೆ ನಡೆಯುವ ಈ ಏಕಾಹ ಭಜನೆಗೆ ಶುಕ್ರವಾರದಂದು ಜನ ಸಾಗರವೇ ಹರಿದು ಬಂದಿದೆ.
ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ನಡೆಯುವ ಈ ಏಕಾಹ ಭಜನೋತ್ಸವದ ಸಂಭ್ರಮದಲ್ಲಿ ದ.ಕ.ಜಿಲ್ಲೆಯ ಹಲವು ಕಡೆಗಳಿಂದ ಭಜನಾ ಸಂಘಗಳು ಕಡಬದ ಏಕಾಹ ಭಜನೆಗೆ ಆಗಮಿಸಿ ಭಜನಾ ಸೇವೆಯನ್ನು ಸಲ್ಲಿಸುವುದು ಇಲ್ಲಿನ ಮೆಚ್ಚಿಗೆಗೆ ಪಾತ್ರವಾಗಿದೆ. ಏಕಾಹ ಭಜನೆ ಆರಂಭವಾದಗಿನಿಂದಲೂ ರಾತ್ರಿ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀ ಸುಬ್ರಹ್ಮಣ್ಯ ಮಠಾಧೀಶರಿಂದ ಆಶೀರ್ವಚನ ಏರ್ಪಡಿಸುವುದು ಸಂಪ್ರದಾಯವಾಗಿದೆ.
ಭಜನೆಯ ದಿನ ದೇವಳಕ್ಕೆ ಮಾಡುವ ವಿದ್ಯುದ್ದೀಪಾಲಂಕಾರ ಮತ್ತು ಆಕರ್ಷಕ ಪ್ರಭಾವಳಿಗಳು ಉತ್ಸವಕ್ಕೆ ಇನ್ನಷ್ಟು ಸೊಬಗನ್ನು ನೀಡುತ್ತವೆ. ಶ್ರೀಗಳನ್ನು ದೇವಳಕ್ಕೆ ಕರೆತರುವ ಭಜನಾ ಮೆರವಣಿಗೆ ಬಂದು ಶ್ರೀ ದೇವರಿಗೆ ಸಮರ್ಪಿಸುವುದು, ರಾತ್ರಿ ನಡೆಯುವ ಆಕರ್ಷಕ ಸಿಡಿಮದ್ದು ಪ್ರದರ್ಶನ ವರ್ಷವಿಡೀ ಏಕಾಹ ಭಜನೆಯ ನೆನಪನ್ನು ಮರುಕಳಿಸುವಂತೆ ಮಾಡುತ್ತದೆ.