ಸುಡುಮದ್ದು, ರಥೋತ್ಸವ : ನಿಶ್ಚಿತ ಸಮಯದಲ್ಲಿ ನಡೆಸುವಂತೆ ಭಕ್ತಾದಿಗಳಿಂದ ಸಹಾಯಕ ಆಯುಕ್ತರಿಗೆ ಮನವಿ

ಪುತ್ತೂರು: ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಸಂಧರ್ಭದಲ್ಲಿ ಸಂತೆ ಇತ್ಯಾದಿಗಳನ್ನು ವ್ಯವಸ್ಥಿತವಾಗಿ ಆಯೋಜಿಸುವುದು, ಸುಡುಮದ್ದು ಪ್ರದರ್ಶನ ಮತ್ತು ರಥೋತ್ಸವವನ್ನು ನಿಶ್ಚಿತ ಸಮಯದಲ್ಲಿ ನಡೆಸುವಂತೆ ಶ್ರೀ ಮಹಾಲಿಂಗೇಶ್ವರ ದೇವರ ಭಕ್ತಾದಿಗಳು ಏ.೧೨ರಂದು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ರಥೋತ್ಸವದ ದಿನ ಶ್ರೀ ದೇವರು ರಥಾರೋಹಣದ ವೀಕ್ಷಣೆಗೆ ಭಕ್ತಾದಿಗಳಿಗೆ  ಸಹಕಾರಿವಾಗುವಂತೆ ರಥಬೀದಿಯಿಂದ ಕನಿಷ್ಠ ೭೫-೮೦ಮೀಟರ್ ದೂರದಲ್ಲಿ ವ್ಯಾಪಾರ ಮಳಿಗೆಗಳನ್ನು ಅಳವಡಿಸುವುದು. ಸುಡುಮದ್ದು ಪ್ರದರ್ಶನವನ್ನು ಸಾಕಷ್ಟು ದೂರದ ಸುರಕ್ಷಿತ ಪ್ರದೇಶದಲ್ಲಿ ವ್ಯವಸ್ಥೆಗೊಳಿಸುವುದು, ರಥೋತ್ಸವವನ್ನು ಮುಹೂರ್ತ ಸಮಯ ಮೀರದಂತೆ  ನಿಗಧಿ ಸಮಯ ನಿಗದಿಪಡಿಸುವುದು. ದೂರದ ಊರುಗಳಿಂದ ಆಗಮಿಸುವ ಭಕ್ತಾದಿಗಳಿಗೆ ಬಸ್ಸಿನ ಸೌಲಭ್ಯಗಳ ಬಗೆ ಸ್ಪಷ್ಟ ಮಾಹಿತಿಯನ್ನು ಧ್ವನಿವರ್ಧಕದ ಮೂಲಕ ಹಾಗೂ ಪತ್ರಿಕೆಗಳಲ್ಲಿ ಮುಂಚಿತವಾಗಿ ಮಾಹಿತಿ ನೀಡುವುದು, ಜಾತ್ರಾ ಗದ್ದೆಯಲ್ಲಿ ಅಂಗಡಿ, ಆಹಾರ ಮಳಿಗೆಗಳಲ್ಲಿ ಆಹಾರದ ಶುಚಿತ್ವ, ನೈರ್ಮಲ್ಯತೆ ಮತ್ತು ಆರೋಗ್ಯ ಸುರಕ್ಷತೆಯ ಬಗ್ಗೆ ಕಟ್ಟು ನಿಟ್ಟಿನ ನಿಗಾ ಮತ್ತು ಮೇಲ್ವಿಚಾರಣೆ ನಡೆಸುವ ಬಗ್ಗೆ ಆಹಾರ ಭದ್ರತಾ ಅಧಿಕಾರಿಗಳು ಅಥವಾ ಸಂಬಂಧಿಸಿದ ಆರೋಗ್ಯಾಧಿಕಾರಿಗಳು ಸೂಕ್ತ ಕ್ರಮ ವಹಿಸಲು ಆದೇಶ ನೀಡುವುದು. ಜಾತ್ರಾ ಗದ್ದೆಯಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ದೇವಸ್ಥಾನ ಅಥವಾ ನಗರ ಸಭೆ ಅಳವಡಿಸುವುದು ಹಾಗೂ ಸಾಂಕ್ರಾಮಿಕ ರೋಗಗಳು ಬರದಂತೆ ಅಗತ್ಯ ಕ್ರಮ ಕೈಗೊಳ್ಳಲು ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿಯಲ್ಲಿ ವಿನಂತಿಸಿದ್ದಾರೆ.

ನ್ಯಾಯವಾದಿಗಳಾದ ಗಿರೀಶ್ ಮಳಿ, ನರಸಿಂಹ ಪ್ರಸಾದ್, ಕೃಷ್ಣ ನಾಯ್ ತೆಂಕಿಲ, ಕೃಷ್ಣಪ್ರಸಾದ್ ನಡ್ತಾರ್, ಕೃಷ್ಣಪ್ಪ ಗೌಡ, ಬನ್ನೂರು ಗ್ರಾ.ಪಂ ಮಾಜಿ ಸದಸ್ಯ ಅಣ್ಣಿ ಪೂಜಾರಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top