ದ್ವಿತೀಯ ಪಿಯುಸಿ ಫಲಿತಾಂಶ : ಪುತ್ತೂರು ಪ್ರಗತಿ ಸ್ಟಡಿ ಸೆಂಟರ್ ಗೆ ಶೇ.99 ಫಲಿತಾಂಶ

ಪುತ್ತೂರು: ಪುತ್ತೂರಿನ ಧರ್ಮಸ್ಥಳ ಬಿಲ್ಡಿಂಗ್‍ ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 2023-24ನೇ ಸಾಲಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ 99 ಫಲಿತಾಂಶ ದಾಖಲಾಗಿದೆ.

ಮಡಿಕೇರಿ ಕಾಟಕೇರಿ ನಿವಾಸಿ, ಆಟೋ ರಿಕ್ಷಾ ಚಾಲಕ ಸಿ.ಎ. ಈಶ್ವರಪ್ಪ ಹಾಗೂ ರುಕ್ಮಣಿ ದಂಪತಿ ಪುತ್ರಿ ದಿಶಾ ಸಿ.ಎಚ್. ಆರೋಗ್ಯ ಸಮಸ್ಯೆಯ ನಡುವೆಯಲ್ಲಿ ದ್ವಿತೀಯ ಪಿ.ಯು.ಸಿ. ಪರೀಕ್ಷೆ ಬರೆದು 517 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

ಆರ್ಯಾಪು ನಿವಾಸಿ ಕೆ.ಪಿ. ಇಬ್ರಾಹಿಂ ಹಾಗೂ ಜುಬೈದ ದಂಪತಿ ಪುತ್ರಿ ಆಯಿಷತ್ತುಲ್ ಮಿಶ್ರಿಯ ಕೆ.ಪಿ. ವಿವಾಹಿತರಾಗಿದ್ದು 2 ವರ್ಷದ ಮಗುವಿದ್ದರೂ ಕಲಾ ವಿಭಾಗದಲ್ಲಿ 479 ಅಂಕಗಳನ್ನುಗಳಿಸಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪುತ್ತೂರಿನ ಮುಕ್ವೆ ನಿವಾಸಿಯಾಗಿರುವ ಶೇಕ್ ಎನ್.ಎ. ಸಲೀಂ ಹಾಗೂ ಆಯಿಷತ್ ಸನ ದಂಪತಿ ಪುತ್ರ ಶೆಖ್ ಮಹಮ್ಮದ್ ಸುಹೈಲ್ ದೃಷ್ಟಿ ದೋಷದ ತೊಂದರೆಯ ನಡುವೆ ದ್ವಿತೀಯ ಪಿ.ಯು.ಸಿ. ವಾಣಿಜ್ಯ ವಿಭಾಗದಲ್ಲಿ 220 ಅಂಕ ಪಡೆದು ತೃತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾನೆ. ಬೆಳ್ತಂಗಡಿ ತಾಲೂಕು ಕಣಿಯೂರು ನಿವಾಸಿ ರಮೇಶ್ ಶೆಟ್ಟಿ ಹಾಗೂ ಶಾಂತ ದಂಪತಿ ಪುತ್ರಿ ಗ್ರೀಶಾ ಕಲಿಕೆಯಲ್ಲಿ ಎಲ್ಲಾ ವಿಷಯಗಳಲ್ಲಿ ಹಿಂದುಳಿದಿದ್ದರೂ ಪರೀಕ್ಷೆಯ ಕೊನೆಯ ದಿನಗಳಲ್ಲಿ ಪ್ರಗತಿಯ ಹಾಸ್ಟೆಲ್‌ನಲ್ಲಿಯೇ ಇದ್ದು 224 ಅಂಕಗಳೊಂದಿಗೆ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾಳೆ.



































 
 

ವಿದ್ಯಾರ್ಥಿಗಳ ಸಾಧನೆಗೆ ಹಾಗೂ ಬೋಧನೆಯನ್ನು ಮಾಡಿದ ಉಪನ್ಯಾಸಕ ವೃಂದದವರಿಗೆ ಸಂಸ್ಥೆಯ ಸಂಚಾಲಕ ಗೋಕುಲ್‌ನಾಥ್ ಪಿ.ವಿ. ಹಾಗೂ ಪ್ರಾಂಶುಪಾಲೆ ಹೇಮಲತಾ ಗೋಕುಲ್‌ನಾಥ್ ಅಭಿನಂದನೆ ಸಲ್ಲಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top