ಗರ್ಭಿಣಿ ಮಹಿಳೆ ಹೃದಯಾಘಾತಕ್ಕೆ ಬಲಿ

ಬೆಳ್ತಂಗಡಿ: ಗರ್ಭಿಣಿ ಮಹಿಳೆಯೊಬ್ಬರು ಹೃದಯಾಘಾತಕ್ಕೆ ಬಲಿಯಾದ ಘಟನೆ ಬೆಳ್ತಂಗಡಿಯ ಕಲ್ಮಂಜ ಆದರ್ಶ ನಗರದಲ್ಲಿ ನಡೆದಿದೆ.

ಆದರ್ಶ ನಗರದ ಹಮೀದ್ ಹಾಗೂ ನಝೀಮ ದಂಪತಿ ಪುತ್ರಿ ನಿಶ್ಚಾ (19) ಮೃತಪಟ್ಟವರು.

ಮೃತ ನಿಶ್ಚಾ ಕುಂಟಿನಿ ನಿವಾಸಿ ಖಾಲಿದ್ ಉಸ್ಮಾನ್ ಅವರ ಸೊಸೆಯಾಗಿದ್ದು ಇವರಿಗೆ ಮದುವೆಯಾಗಿ 9 ತಿಂಗಳಾಗಿದ್ದು, ಇವರು 4 ತಿಂಗಳ ಗರ್ಭಿಣಿಯಾಗಿದ್ದರು ಎಂದು ತಿಳಿದು ಬಂದಿದೆ.































 
 

ಮಹಿಳೆಯರು ಮೆನೋಪಾಸ್ ಆಗುವ ತನಕ ಅವರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಹುತೇಕ ಮುಕ್ತರು ಎಂದು ವೈದ್ಯಲೋಕ ಹೇಳುತ್ತಿದೆ. ಅದರಲ್ಲೂ ಗರ್ಭವತಿ ಮಹಿಳೆಯರು ಅತ್ಯಂತ ಸುರಕ್ಷಿತರು ಎಂದೂ ನಂಬಲಾಗಿತ್ತು. ಆದರೆ ಸಣ್ಣ ಪ್ರಾಯದ ಈ ಗರ್ಭಿಣಿ ಮಹಿಳೆಯ ಅನಿರೀಕ್ಷಿತ ಸಾವು ಕುಟುಂಬಸ್ಥರನ್ನು ಆತಂಕಕ್ಕೆ ದೂಡಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top