ಏ.14 ರಿಂದ 16  ರ ತನಕ ಹಿರಿಯರಿಗೆ ಮತದಾನ ಪ್ರಕ್ರಿಯೆ | ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 787 ಮಂದಿ 85 ವರ್ಷ ಮೇಲ್ಪಟ್ಟವರು, 340 ಮಂದಿ ಅಂಗವಿಕಲರು

ಪುತ್ತೂರು: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮನೆ  ಮತದಾನಕ್ಕೆ ಅರ್ಹ ವ್ಯಕ್ತಿಗಳಾದ 85 ವರ್ಷ ಮೇಲ್ಪಟ್ಟವರು 787 ಮಂದಿ ಮತ್ತು 340 ಅಂಗವಿಕಲರು ಮನೆಯಲ್ಲೇ ಮತದಾನ ಚಲಾಯಿಸಲಿದ್ದಾರೆ. ಈ ಮತದಾನ ಪ್ರಕ್ರಿಯೆ ಎ.14 ರಿಂದ 16ರ ತನಕ ನಡೆಯಲಿದೆ ಎಂದು ಸಹಾಯಕ ಚುನಾವಣಾಧಿಕಾರಿ, ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ತಿಳಿಸಿದ್ದಾರೆ.

ಗುರುವಾರ ಸಹಾಯಕ ಆಯುಕ್ತರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಹಿಂದೆ 85 ವರ್ಷ ಮೇಲ್ಪಟ್ಟ ಮತ್ತು ಅಂಗವಿಕಲರಿಗೆ ಮನೆಯಲ್ಲೇ ಮತದಾನ ಮಾಡಲು ಅರ್ಜಿ ನಮೂನೆ ನೀಡಿದ್ದೆವು. ಈ ಅರ್ಜಿಯ ಮೂಲಕ ಅವರು ಮನೆಯಲ್ಲೇ ಅಥವಾ ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ತಮ್ಮ ಅಭಿಪ್ರಾಯ ಮಂಡಿಸಿದಂತೆ ಮನೆಯಲ್ಲೇ ಮತದಾನ ಮಾಡುವ 85 ವರ್ಷ ಮೇಲ್ಪಟ್ಟವರು 787 ಮಂದಿ ಮತ್ತು 340 ಅಂಗವಿಕಲರು ಮನೆಯಲ್ಲೇ ಮತ ಚಲಾಯಿಸುವ ಮನವಿ ಮಾಡಿದ್ದಾರೆ. ಈ ಮತದಾನ ಪ್ರಕ್ರಿಯೆಯು ಕ್ಷೇತ್ರ ಶಿಕ್ಷಣಾಧಿಕಾರಿಯವರ ನೇತೃತ್ವದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ನೇತೃತ್ವದಲ್ಲಿ ತಂಡವೊಂದು ರಚನೆ ಮಾಡಲಾಗಿದೆ. ಆ ತಂಡ ಎಲ್ಲಾ ಅರ್ಹ ಮತದಾರರಿಗೆ ಕರೆ ಮಾಡಿ ಮತದಾನ ಪ್ರಕ್ರಿಯೆಗೆ ಮನೆಗೆ ಬರುವ ದಿನಾಂಕವನ್ನು ತಿಳಿಸಲಾಗಿದೆ. ಈ ಕುರಿತು ರಾಜಕೀಯ ಪಕ್ಷಗಳಿಗೂ ಎಷ್ಟು ಮಂದಿ ಮತದಾನ ಮಾಡುತ್ತಾರೆ ಮತ್ತು ಅವರ ಮತಪಟ್ಟಿಗಳ ಕುರಿತು ಮಾಹಿತಿ ನೀಡಲಾಗಿದೆ. ಮನೆ ಮನೆ ಮತದಾನದಲ್ಲಿ ಜಿಲ್ಲಾಧಿಕಾರಿ ಹಂತದಲ್ಲಿ ನೇಮಕವಾಗಿರುವ ಪಿ.ಆರ್.ಒ, ಕ್ಯಾಮರ ಮ್ಯಾನ್, ಪೊಲೀಸರು, ಮೈಕ್ರೋ ಅಬ್ಬರರ್ ಅವರು ಭಾಗವಹಿಸಲಿದ್ದಾರೆ. ಅವರಿಗೆ ಯಾವ ರೀತಿ ಮತದಾನ ಪ್ರಕ್ರಿಯೆ ನಡೆಸಬೇಕೆಂದು ವಿವೇಕಾನಂದ ಶಾಲೆಯಲ್ಲಿ ತರಬೇತಿ ನಡೆಯುತ್ತಿದೆ. ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆಯಲಿದೆ ಎಂದು ಹೇಳಿದರು.



































 
 

:

ಎ.14ರಂದು ಬೆಳಿಗ್ಗೆ ಸೆಕ್ಸರ್ ಅಧಿಕಾರಿಗಳು ವಿವಿಧ ನಿಗದಿ ಮಾಡಿದ ರೂಟ್‌ಗಳಲ್ಲಿ ತೆರಳಲಿದ್ದಾರೆ. ಯಾವ ಬೂತ್‌ಗೆ ಪ್ರಥಮ ಯಾವ ಬೂತ್‌ಗೆ ಕೊನೆಗೆ ಹೋಗಬೇಕೆಂದು ಪಟ್ರಿ ಮಾಡಿದಂತೆ ಸೆಕ್ಸರ್ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ.

ಅಗತ್ಯ ಕರ್ತವ್ಯದಲ್ಲಿರುವ 34 ಸಿಬ್ಬಂದಿಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಸಿಬ್ಬಂದಿಗಳಿಗೆ ಪಿವಿಸಿ ಸೆಂಟರ್‌ನಲ್ಲಿ ಮತದಾನಕ್ಕೆ ಅವಕಾಶವಿದೆ ಎಂದು ತಿಳಿಸಿದರು.

ಚುನಾವಣಾ ಕರ್ತವ್ಯದಲ್ಲಿರುವವರಿಗೆ ಪುತ್ತೂರಿನಲ್ಲಿ ಮತದಾನ ಹಕ್ಕು ಇದ್ದರೆ ಅವರಿಗೆ ಫಾರ್ಮ್ 12 ಮೂಲಕ ಯಾವುದೇ ಮತಗಟ್ಟೆಗೆ ಹೋಗಿ ಅಲ್ಲಿ ಪ್ರಮಾಣ ಪತ್ರ ತೋರಿಸಿ ಮತದಾನ ಮಾಡಬಹುದು. ಬೇರೆ ಜಿಲ್ಲೆಯಿಂದ ಬಂದವರಿಗೆ ಫಾರ್ಮ್ 12 ಎ ಪೋಸ್ಟಲ್ ಮತದಾನ ಪಕ್ರಿಯೆ ನಡೆಯಲಿದೆ. ಈ ಮತದಾನ ಪ್ರಕ್ರಿಯೆ ಎ.15ರ ಒಳಗೆ ಮುಗಿಸಬೇಕಾಗಿದೆ. ಹಾಗಾಗಿ ಎ.13ರ ಒಳಗೆ ಚುನಾವಣಾ ಕರ್ತವ್ಯದಲ್ಲಿರುವವರು ಎಲ್ಲಾ ಫಾರ್ಮ್ 12 ಮತ್ತು 12 ಎ ಅನ್ನು ತಹಶೀಲ್ದಾರ್ ಕಚೇರಿಗೆ ನೀಡಬೇಕು. ಆಗ ನಾವು ಅದನ್ನು ಪರಿಶೀಲಿಸಿ ಎ.14ಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೇಕಾಗಿದೆ.

ಧಾರ್ಮಿಕ ಆಚರಣೆಯಲ್ಲಿ ರಾಜಕೀಯ ಚಟುವಟಿಕೆಗೆ ಅವಕಾಶವಿಲ್ಲ:

ಈಶ್ವರಮಂಗಲ ಚೆಕ್ ಪೋಸ್ಟ್‌ನಲ್ಲಿ 1.3ಲಕ್ಷ ಜಪ್ತಿಯಾಗಿತ್ತು. ಆದರೆ ಸರಿಯಾದ ದಾಖಲೆ ನೀಡಿದ ಬಳಿಕ ಅದನ್ನು ಬಿಡುಗಡೆ ಮಾಡಲಾಗಿದೆ. ಬೇರೆ ಇತರ ಎರಡು ಪ್ರಕರಣ ದಾಖಲಾಗಿದೆ. ಕೆಲವರಿಗೆ ಶೋಕಾಸ್ ನೋಟೀಸ್ ಕೂಡಾ ಜಾರಿ ಮಾಡಿದ್ದೇವೆ. ಚುನಾವಣಾಗೆ ಸಂಬಂಧಿಸಿ ಬ್ಯಾನ‌ರ್ ಪ್ರದರ್ಶನದಲ್ಲಿ ಮಾ.20ಕ್ಕೆ ಪ್ರಥಮ ಎಫ್‌ಐಆರ್ ದಾಖಲಾಗಿದೆ. ಖಾಸಗಿ ಧಾರ್ಮಿಕ, ಜಾತ್ರೆಯಲ್ಲಿ ರಾಜಕೀಯ ಮುಖಂಡರು ಭಕ್ತರಾಗಿ ಹೋಗಬಹುದು. ಆದರೆ ಜಾತ್ರೆ, ಆಚರಣೆಗೆ ಅನುಮತಿ ಪಡೆಯಬೇಕು. ರಾಜಕೀಯ ಸಭೆಗೆ ಮತ್ತು ಧಾರ್ಮಿಕ ಆಚರಣೆಗೆ ಪ್ರತ್ಯೇಕ ಅನುಮತಿ ಪಡೆಯಬೇಕು. ಧಾರ್ಮಿಕ ಆಚರಣೆಯಲ್ಲಿ ಯಾವುದೇ ರೀತಿಯ ರಾಜಕೀಯ ಚಟುವಟಿಕೆ ಮಾಡಬಾರದು ಎಂದು ಅನುಮತಿ ಪತ್ರದಲ್ಲಿ ದಾಖಲು ಮಾಡಲಾಗಿದೆ ಎಂದರು ತಿಳಿಸಿದರು.

ವೇದಿಕೆಯಲ್ಲಿ ಶಿಕ್ಷಣಾಧಿಕಾರಿ ಲೋಕೇಶ್‍, ತಹಸೀಲ್ದಾರ್ ಕುಂಞ ಅಹಮ್ಮದ್, ಚುನಾವಣಾ ನೋಡೆಲ್ ಅಧಿಕಾರಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಹನುಮ ರೆಡ್ಡಿ, ಹಿರಿಯ ನೋಡೆಲ್ ಅಧಿಕಾರಿ ಶಿವಶಂಕರ್ ದಾನಗೊಂಡ, ಉಪತಹಶೀಲ್ದಾರ್ ಸುಲೋಚನಾ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top