ಪುತ್ತೂರು: ಮಹಿಳೆಯರಿಗೆ ಗೌರವ, ಸ್ವಾವಲಂಬಿ ಬದುಕು ನೀಡಿದ ಪ್ರಧಾನಿ ಇದ್ದರೆ ಅದು ನರೇಂದ್ರ ಮೋದಿ. ತನ್ನ ಸ್ವಂತ ಆಚರಣೆಗಿಂತ ದೇಶದ ಆಚರಣೆ ಮುಖ್ಯ ಎಂದು ತಿಳಿದಿದ್ದರೆ ಅದು ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯರು.
ಹೀಗೆಂದು ಹೇಳಿದರು ರಾಜ್ಯ ಬಿಜೆಪಿ ಉಪಾಧ್ಯಕ್ಷೆ, ಚಿತ್ರನಟಿ ಮಾಳವಿಕ ಅವಿನಾಶ್.
ಪುತ್ತೂರಿನ ಜೈನ ಭವನದಲ್ಲಿ ಮಂಗಳವಾರ ನಡೆದ ಪುತ್ತೂರು ವಿಧಾನಸಭಾ ಕ್ಷೇತ್ರದ ನಾರಿಶಕ್ತಿ ಸಮಾವೇಶವನ್ನು ಭಾರತದ ಮಾತೆ ಭಾವಚಿತ್ರದ ಬಳಿ ದೀಪ ಬೆಳಗಿಸಿ, ಬಳಿಕ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಹಿರಿಯರಿಗೆ, ಮಹಿಳೆಯರಿಗೆ ಗೌರವ ನೀಡುವ ಮನಸ್ಥಿತಿ ಪ್ರಧಾನಿ ನರೇಂದ್ರ ಮೋದಿಯವರಲ್ಲಿದ್ದು, ಮತ್ತೊಮ್ಮೆ ಅವರನ್ನು ಪ್ರಧಾನಿಯಾಗಿಸುವಲ್ಲಿ ನಾರಿಶಕ್ತಿಯ ಪಾತ್ರ ಮುಖ್ಯವಾಗಿದೆ ಎಂದ ಅವರು, ಕಾಂಗ್ರೆಸ್ ಸರಕಾರ ಸುಳ್ಳು ಹೇಳಿ ಜನರಿಗೆ ಮೋಸ ಮಾಡುತ್ತಿದೆ ಎಂದರು.
2014 ರ ಮೊದಲು ಕಾಂಗ್ರೆಸ್ ಸರಕಾರದಿಂದಾಗಿ ದೇಶ ಭ್ರಷ್ಟಾಚಾರದ ಕೂಪವಾಗಿತ್ತು ಎಂದು ಆರೋಪಿಸಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವನ್ನು ಅನುಸರಿಸಿದ ಅನೇಕ ರಾಷ್ಟ್ರಳಿವೆ. ಭಾರತವನ್ನು ಜಗತ್ತಿನ ಉತ್ತುಂಗಕ್ಕೆ ಏರಲು ನರೇಂದ್ರ ಮೋದಿಯವರ ಪ್ರಯತ್ನ ಮೆಚ್ಚುವಂತದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಈ ನಿಟ್ಟಿನಲ್ಲಿ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ 28 ರಲ್ಲಿ 28 ಸ್ಥಾನಗಳನ್ನೂ ಗೆಲ್ಲಿಸುವ ಪ್ರಯತ್ನ ಆಗಬೇಕಾಗಿದ್ದು, ನಾರಿಶಕ್ತಿ ಒಟ್ಟಾದರೆ ಇದಕ್ಕೆ ಸಂಶಯವೇ ಇಲ್ಲ ಎಂದು ಹೇಳಿದರು.
ದ.ಕ.ಜಿಲ್ಲಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಮಹಿಳೆಯರಿಗಾಗಿ ಪ್ರಧಾನಿ ಜಾರಿಗೆ ತಂದ ಹಲವಾರು ಯೋಜನೆಗಳಿಂದ ಶೇ.90 ರಷ್ಟು ಮಹಿಳೆಯರು ಮೋದಿಯವರ ಮೇಲೆ ವಿಶ್ವಾವಿಟ್ಟಿದ್ದಾರೆ. ದೇಶದ ಭವಿಷ್ಯಕ್ಕಾಗಿ, ಸಂಸ್ಕೃತಿ, ಸಂಸ್ಕಾರ ಉಳಿಸುವಲ್ಲಿ ನರೇಂದ್ರ ಮೋದಿಯವರ ಪಾತ್ರ ಮಹತ್ವದ್ದು, ಕುಟುಂಬ ರಾಜಕಾರಣ, ತುಷ್ಠೀಕರಣವನ್ನು ಯಾವತ್ತೂ ನರೇಂದ್ರ ಮೋದಿ ಮಾಡಿಲ್ಲ. ಈ ನಿಟ್ಟಿನಲ್ಲಿ ಈ ಬಾರಿಯ ಚುನಾವಣೆ ಕಾಂಗ್ರೆಸ್‍ನ ಮಾನಸಿಕತೆಯ ವಿರುದ್ಧ ಎಂದು ಹೇಳಿದರು.
ಸುಳ್ಯ ಶಾಸಕ ಭಾಗೀರಥಿ ಮುರುಳ್ಯ ಮಾತನಾಡಿ, ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ಮುಖ್ಯ ಎಂಬ ತತ್ವವನ್ನು ಹೊಂದಿರುವುದು ಮುಖ್ಯ ಎಂಬ ನಿಟ್ಟಿನಲ್ಲಿ ಚುನಾವಣೆ ನಡೆಯಲಿದೆ. ನರೇಂದ್ರ ಮೋದಿಯವರ ಹಲವಾರು ಯೋಜನೆಗಳನ್ನು ಅಸ್ತ್ರವಾಗಿ ಬಳಸಿ ತಾಲೂಕು, ಬೂತ್ ಮಟ್ಟದಲ್ಲಿ ಗೆಲ್ಲಿಸುವ ಕಾರ್ಯ ಆಗಬೇಕು ಎಂದರು.
ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಭಾರಿ ಸುಲೋಚನಾ ಜಿ.ಕೆ. ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಶಾಸಕರಾದ ಸಂಜೀವ ಮಠಂದೂರು, ಮಲ್ಲಿಕಾ ಪ್ರಸಾದ್, ಮಹಿಳಾ ಬಿಜೆಪಿ ಪ್ರಮುಖರಾದ ಆಶಾ ತಿಮ್ಮಪ್ಪ, ಮೀನಾಕ್ಷಿ ಶಾಂತಿಗೋಡು, ಶಯನಾ ಜಯಾನಂದ, , ವಿದ್ಯಾ ಆರ್. ಗೌರಿ, ಜಯಶ್ರೀ ಶೆಟ್ಟಿ, ಜಿಲ್ಲಾ ಬಿಜೆಪಿಯ ಮಂಜುಳಾ ರಾವ್, ಯಶಸ್ವಿನಿ ಶಾಸ್ತ್ರೀ, ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮತ್ತಿತರರು ಉಪಸ್ಥಿತರಿದ್ದರು. ಸಭೆಯಲ್ಲಿ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಅರುಣ್ ಕುಮಾರ್ ಪುತ್ತಿಲ, ಆರ್.ಸಿ.ನಾರಾಯಣ, ಚನಿಲ ತಿಮ್ಮಪ್ಪ ಶೆಟ್ಟಿ, ಹರಿಪ್ರಸಾದ್ ಯಾದವ್, ನಿತಿಶ್ ಕುಮಾರ್ ಶಾಂತಿವನ ಮತ್ತಿತರರು ಉಪಸ್ಥಿತರಿದ್ದರು.
ಗೌರಿ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲೆಯ ಪ್ರತೀ ಬೂತ್‍ಗಳಲ್ಲಿ ಮೊದಲ ಓಟ್ ಮಹಿಳೆಯರದ್ದು:
ಪುತ್ತೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯ ಪ್ರತಿಯೊಂದು ಬೂತ್‍ಗಳಲ್ಲಿ ಮೊದಲ ಓಟು ಮಹಿಳೆಯರು ಹಾಕಬೇಕು ಎಂದು ದ.ಕ.ಜಿಲ್ಲಾ ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ವಿನಂತಿಸಿದ್ದಾರೆ.