ಕಡಬ: ತಾಲೂಕಿನ ಕುದ್ಮಾರು ಗ್ರಾಮದ ಈರ್ವೆರ್ ಉಳ್ಳಾಕುಲು, ಕೆಡೆಂಜೋಡಿತ್ತಾಯ, ವ್ಯಾಘ್ರ ಚಾಮುಂಡಿ ಮತ್ತು ಕುಟುಂಬ ಸಂಬಂಧಪಟ್ಟ ಧರ್ಮದೈವ ಧೂಮಾವತಿ ಹಾಗೂ ಪರಿವಾರ ದೈವಗಳ ಸಾನಿಧ್ಯ ಕೆಡೆಂಜಿಗುತ್ತು ಧರ್ಮಚಾವಡಿಯಲ್ಲಿ ಏ.24 ರಿಂದ ಮೇ 2 ರ ತನಕ ನಡೆಯುವ ಪುನರ್ ಪ್ರತಿಷ್ಠಾ ಕಲಶ, ಗೃಹಪ್ರವೇಶ ಹಾಗೂ ಶ್ರೀ ಮದ್ಭಾಗವತ ಸಪ್ತಾಹದ ಆಮಂತ್ರಣದೊಂದಿಗೆ ಕಾರ್ಯಕ್ರಮದ ಯಶಸ್ಸಿಗೆ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಪ್ರತಿಷ್ಠಾ ಕಲಶೋತ್ಸವ ಸಮಿತಿ ಅಧ್ಯಕ್ಷ ವೆಂಕಟೇಶ್ ಭಟ್ ಕೊಯಕ್ಕುಡೆ, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಕೆಡೆಂಜಿಗುತ್ತು ಪ್ರವೀಣ್ ಕುಮಾರ್, ಕೆಡೆಂಜಿಗುತ್ತು ದಿನೇಶ್ ಕುಮಾರ್, ಕೆಡೆಂಜಿಗುತ್ತು ಶಕುಂತಳಾ ಗೋಪಾಲ್ ಪೂಜಾರಿ, ಕೆಡೆಂಜಿಗುತ್ತು ಜಯಂತಿ, ಕೆಡೆಂಜಿಗುತ್ತು ದಿನಮಣಿ ನಿತಿನ್ ಚಂದ್ರ, ಕೆಡೆಂಜಿಗುತ್ತು ವಸುಧಾ ಶಶಿಧರ್ ಹಾಗೂ ಕುಟುಂಬಸ್ಥರು, ಊರವರು ಉಪಸ್ಥಿತರಿದ್ದರು.
ಏ.24 ರಿಂದ ಮೇ 2 ರತನಕ ನಡೆಯಲಿದ್ದು, ಮೇ 2 ರಂದು ಬೆಳಿಗ್ಗೆ 10.14 ರ ಮಿಥುನ ಲಗ್ನ ಶುಭ ಮುಹೂರ್ತದಲ್ಲಿ ದೈವಜ್ಞರಾದ ಗಣೇಶ್ ಭಟ್ ಕೇಕನಾಜೆ ಅವರ ಮಾರ್ಗದರ್ಶನದಲ್ಲಿ, ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ದೈವಗಳ ಪ್ರತಿಷ್ಠಾ ಕಲಶೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಏ.24 ರಿಂದ 30 ರ ವರೆಗೆ ಪ್ರತಿದಿನ ನಡೆಯುವ ಸಪ್ತಾಹ ಯಜ್ಞದ ಅಂಗವಾಗಿ ಬೆಳಿಗ್ಗೆ 6 ಕ್ಕೆ ಶ್ರೀ ವಿಷ್ಣುಸಹಸ್ರನಾಮ ಪಾರಾಯಣಾರಂಭ, 6.30 ಕ್ಕೆ ಶ್ರೀ ಮದ್ಭಾಗವತಾ ಪಾರಾಯಣಾರಂಭ, ಕೃಷ್ಣ ಪೂಜೆ, 8.30 ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ, 9.30 ರಿಂದ ಪಾರಾಯಣ, ಕಲ್ಪೋಕ್ತ ಪೂಜೆ, ಮಧ್ಯಾಹ್ನ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30 ರಿಂದ 5.30 ರ ವರೆಗೆ ನಾಮ ಸಂಕೀರ್ತನೆ, 5.30 ರಿಂದ ಕಥಾಪ್ರವಚನ, ರಾತ್ರಿ 8.45 ಕ್ಕೆ ಕಥಾ ಮಂಗಳ, ಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.