ಪುತ್ತೂರು: ಎ. ಆರ್ ವಾರಿಯರ್ಸ್ ಮುಖ್ಯಸ್ಥ ಪ್ರಜ್ವಲ್ ರೈ ಪಾತಾಜೆ ಅವರಿಗೆ ಗಡಿಪಾರು ಆದೇಶ ಹೊರಡಿಸಿ ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರು ಆದೇಶಕ್ಕೆ ಶಿಪಾರಸ್ಸು ಮಾಡಿದ್ದಾರೆ.
ಕರ್ನಾಟಕ ಪೊಲೀಸ್ ಅಧಿನಿಯಮ 1963ರ ಕಲಂ 55ರಂತೆ ಬಳ್ಳಾರಿಯ ಬ್ರೂಸ್ ಜಿಲ್ಲೆಯ ಬ್ರೂಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಅವರನ್ನು ಗಡಿಪಾರು ಮಾಡಲು ಶಿಪಾರಸ್ಸು ಮಾಡಲಾಗಿದೆ.
ರಾಜಕೀಯ ಪಕ್ಷವೊಂದರಲ್ಲಿ ಗುರುತಿಸಿಕೊಂಡಿರುವ ಪ್ರಜ್ವಲ್ ರೈ ವಿರುದ್ದ ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಸೇರಿದಂತೆ ವಿವಿಧ ಠಾಣೆಗಳಲ್ಲಿ ಕಾನೂನು ಉಲ್ಲಂಘನೆ ಮಾಡಿರುವ ಕುರಿತಾಗಿ ಪ್ರಕರಣಗಳು ದಾಖಲಾಗಿವೆ.
ಹೀಗಾಗಿ ಅವರಿಗೆ ಗಡಿಪಾರು ಆದೇಶಕ್ಕೆ ಶಿಪಾರಸ್ಸು ಮಾಡಲಾಗಿದೆ.
ಆದರೇ ಇತ್ತೀಚೆಗೆ ಬಿಜೆಪಿ ಕಾರ್ಯಕರ್ತರೊಬ್ಬರ ಮನೆ ಬಾಗಿಲಿಗೆ ಚೆಂಡೆ ಬ್ಯಾಂಡ್ ಮೊಳಗಿಸಿಕೊಂಡು, ತನ್ನ ಸ್ನೇಹಿತರೊಂದಿಗೆ ತೆರಳಿದ ಪ್ರಜ್ವಲ್ ರೈವರು ಅಭಿವೃದ್ದಿ ಕಾಮಗಾರಿಗಳ ಮಾಹಿತಿಯುಳ್ಳ ಬ್ಯಾನರನ್ನು ಪ್ರದರ್ಶಿಸಿದ್ದರು. ಇದು ವಿವಾದದ ಸ್ವರೂಪ ಪಡೆದಿತ್ತು. ಈ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.