ಬೆಳ್ತಂಗಡಿ: ಮಹಿಳೆಯೊಬ್ಬರು ಫೇಸ್ ಬುಕ್ ಆ್ಯಪ್ ಸಾಲದ ವಂಚನೆಗೆ ಬಲಿಯಾಗಿ ಸಾವಿರಾರು ರೂ. ಕಳೆದುಕೊಂಡ ಘಟನೆ ನಡೆದಿದೆ.
ತೆಂಕಕಾರಂದೂರು ಗ್ರಾಮದ ಮಹಿಳೆ ನೆಬಿಸಾ (38) ವಂಚನೆಗೊಳಗಾದವರು.
ಮಾ.21 ರಂದು ಫೇಸ್ ಬುಕ್ ನಲ್ಲಿ ಮನಿ ವ್ಯೂವ್ ಪರ್ಸನಲ್ ಲೋನ್ ಆ್ಯಪ್ ಮೂಲಕ ಅಪರಿಚಿತರು ಪರಿಚಯಿಸಿಕೊಂಡಿದ್ದರು. ನೆಬಿಸಾ ಸಾಲದ ಕುರಿತು ಅಪರಿಚಿತರಿಂದ ಮಾಹಿತಿ ಪಡೆದು ಐದು ಲಕ್ಷ ರೂ. ಸಾಲ ಪಡೆಯಲು ದಾಖಲೆಗಳನ್ನು ಕಳುಹಿಸಿದ್ದರು. ಬಳಿಕ ಫೋನ್ ಮೂಲಕ ನೆಬಿಸಾ ಅವರನ್ನು ಸಂಪರ್ಕಿಸಿದ ವಂಚಕರು ವಿವಿಧ ಹಂತದಲ್ಲಿ 96,743 ರೂ.ಗಳನ್ನು ಆನ್ ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ಬಳಿಕ ಸಾಲ ನೀಡದೇ, ಖಾತೆಗೆ ವರ್ಗಾಯಿಸಿಕೊಂಡ ಹಣ ನೀಡದೆ ವಂಚಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ನೆಬಿಸಾ ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.