ಕಾಪು: ಪೋಲಿಸ್ ಠಾಣೆಯ ಮಹಿಳಾ ಸಿಬಂದಿ ಜ್ಯೋತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಅವರ ಪತಿ ರವಿಕುಮಾರ್ (35) ಅವರನ್ನು ಕಾಪು ಪೋಲಿಸರು ಬಂಧಿಸಿದ್ದಾರೆ.
ಆತ್ಮಹತ್ಯೆಗೈದ ಬಳಿಕ ಜ್ಯೋತಿ ಅವರ ಕೊಠಡಿಯಲ್ಲಿ ಡೈರಿಯೊಂದು ಸಿಕ್ಕಿದ್ದು ಅದರಲ್ಲಿ ಆಕೆ ತನ್ನ ಆತ್ಮಹತ್ಯೆಗೆ ನನ್ನ ಗಂಡನ ಸಂಶಯ ಪ್ರವೃತ್ತಿಯೇ ಕಾರಣ ಎಂದು ಬರೆದುಕೊಂಡಿದ್ದಾಗಿ ಆಕೆಯ ತಾಯಿ ದೇವಮ್ಮ ವಿಟ್ಲಾಪುರ ಪೋಲಿಸರಿಗೆ ದೂರು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಪೋಲೀಸರು ಶನಿವಾರ ತಡರಾತ್ರಿ ಆಕೆಯ ಪತಿಯನ್ನು ಬಂಧಿಸಿದ್ದಾರೆ.
ಬಾಗಲಕೋಟೆ ಮೂಲದ ರವಿ ಕುಮಾರ್ ಕೆಎಸ್ ಆರ್ ಟಿಸಿಯಲ್ಲಿ ಮ್ಯೆಕ್ಯಾನಿಕ್ ಆಗಿದ್ದು ಕಾಪು ಠಾಣೆಗೆ ಹೊಂದಿಕೊಂಡಿರುವ ಪೋಲಿಸ್ ಕ್ವಾಟ್ರಸ್ ನಲ್ಲಿ ತಮ್ಮ ಪತ್ನಿಯೊಂದಿಗೆ ವಾಸವಿದ್ದರು.
ಪತಿಪತ್ನಿಯ ನಡುವೆ ಆಗಾಗ ಜಗಳವಾಗುತ್ತಿದ್ದು, ಈ ಹಿನ್ನಲೆಯಲ್ಲಿ ಮನನೊಂದು ಜ್ಯೋತಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ.