ಪುತ್ತೂರು: ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ರಾಧಾಕೃಷ್ಣ ನಾಯ್ಕ್ ಏಳ್ನಾಡುಗುತ್ತು ಅವರನ್ನು ಪುತ್ತೂರು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನ್ಯೂಸ್ ಪುತ್ತೂರು ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ರಾಧಾಕೃಷ್ಣ ನಾಯ್ಕ್, ಪ್ರಾಮಾಣಿಕತೆಗೆ ಯಾವತ್ತೂ ಬೆಲೆ ಇದೆ. ಜಗತ್ತು ನಾವು ನೋಡಿದ ಹಾಗೆ ಇಲ್ಲ. ಜಗತ್ತನ್ನು ವಾಸ್ತವಾಂಶವಾಗಿ ನಾವು ಕಾಣುವುದು ಬೇರೆಯೇ. ನಾವು ನೋಡುತ್ತಿರುವ ಜಗತ್ತು ಬೇರೆಯೇ. ನ್ಯೂಸ್ ಪುತ್ತೂರು ಇಷ್ಟೊಂದು ವ್ಯವಸ್ಥಿತವಾಗಿ ಇದೆ ಎಂಬುದು ನನಗೆ ಇಂದು ಗೊತ್ತಾಗಿದೆ ಎಂದ ಅವರು, ಧಾರ್ಮಿಕವಾಗಿ ತೊಡಗಿಸಿಕೊಳ್ಳಲು ಯಾವ ಸೇವೆಗೂ ನಾನು ಸಿದ್ಧ ಎಂದರು.
ಈ ಸಂದರ್ಭದಲ್ಲಿ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಕೆ.ರಾಜೇಂದ್ರ ಪ್ರಸಾದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮುರಳೀಧರ ಕೆ.ಎಲ್., ಟ್ರಸ್ಟಿಗಳಾದ ವಸಂತ ಎಸ್. ವೀರಮಂಗಲ, ಸೀತಾರಾಮ ಕೇವಳ, ಹರೀಶ್ ಉಬರಡ್ಕ, ನಾಗೇಶ್ ಕೆಡೆಂಜಿ, ವೆಂಕಟೇಶ್ ಭಟ್ ಕೊಯಕ್ಕುಡೆ, ಗುರುಪ್ರಸಾದ್ ರೈ ಹಾಗೂ ಯತೀಶ್ ಪೂಜಾರಿ ಉಪಸ್ಥಿತರಿದ್ದರು.