ಪುತ್ತೂರು: ತಾಯಿ ಮಗುವಿನೊಂದಿಗೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಅಡ್ಯಾರ್ ಪದವು ನಿವಾಸಿ ಚೈತ್ರ, ಹಾಗೂ ಒಂದು ವರ್ಷದ ಮಗು ದಿಯಾಂಶ್ ಎಂಬವರ ಮೃತದೇಹ ಹರೇಕಳ ಸೇತುವೆ ಬಳಿ ಪತ್ತೆಯಾಗಿದೆ.
ಶುಕ್ರವಾರ ಮಧ್ಯಾಹ್ನ ತಾಯಿ-ಮಗು ನಾಪತ್ತೆಯಾಗಿದ್ದ ಹಿನ್ನಲೆಯಲ್ಲಿ ಹುಡುಕಾಟಕ್ಕೆ ಸಂಬಂಧಿಕರು ಮನವಿ ಮಾಡಿದ್ದರು. ಈ ನಡುವೆ ಶುಕ್ರವಾರವೇ ಮಗುವಿನ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ದೇರಳಕಟ್ಟೆ ಸೇವಾಶ್ರಮದಲ್ಲಿ ಆಚರಿಸಿದ್ದರು ಎನ್ನಲಾಗಿದೆ.
ಆತ್ಮಹತ್ಯೆಗೆ ಕಾರಣಗಳು ತಿಳಿದು ಬಂದಿಲ್ಲ.