ಪುತ್ತೂರು: ಬ್ಯಾಂಕಿಂಗ್ ಕ್ಷೇತ್ರದಲ್ಲಿ 45 ವರ್ಷಗಳ ಇತಿಹಾಸವಿರುವ, ಮಂಗಳೂರಿನ ಮೊರ್ಗನ್ಸ್ ಗೇಟ್ ಜಪ್ಪುನಲ್ಲಿ ಪ್ರಧಾನ ಕಚೇರಿ ಹೊಂದಿರುವ ಶ್ರೀ ಭಗವತೀ ಸಹಕಾರ ಬ್ಯಾಂಕ್ 8ನೇ ಶಾಖೆ ಮಾ.28 ಗುರುವಾರ ಏಳ್ಮುಡಿ ಮಹಾದೇವಿ ಸಂಕೀರ್ಣದ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿತು.
ಮುಖ್ಯ ಅತಿಥಿಯಾಗಿದ್ದ ನ್ಯಾಯವಾದಿ ಪಿ .ಕೆ ಸತೀಶನ್ ಮಾತನಾಡಿ, ಸಹಕಾರ ಸಂಘಗಳಿಗೂ ಸಹಕಾರ ಬ್ಯಾಂಕ್ ಗಳಿಗೂ ವ್ಯತ್ಯಾಸಗಳಿವೆ. ನಗರ ಸಹಕಾರಿ ಬ್ಯಾಂಕ್ ಗಳು ಆರ್ ಬಿ ಐ ಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಜನರಿಗೆ ಬ್ಯಾಂಕ್ನಿಂದ ಯಾವುದೇ ಸಮಸ್ಯೆ ಉಂಟಾಗಲು ಸಾಧ್ಯವಿಲ್ಲ. ಬಹಳಷ್ಟು ಸಹಕಾರಿ ಸಂಘಗಳು, ಬ್ಯಾಂಕ್ ಗಳು ದ.ಕ ಜಿಲ್ಲೆಯಲ್ಲಿ ಪ್ರಾರಂಭವಾದ ಇತಿಹಾಸವಿದೆ. ಆರ್ಥಿಕ ನೀತಿಯಿಂದ ಕೆಲವೊಂದು ಬ್ಯಾಂಕ್ ಗಳ ಹೆಸರು ಬದಲಾಗಿದೆ. ವಾಣಿಜ್ಯ ಬ್ಯಾಂಕ್ ಗಳು ಅಧಿಕವಾಗಿದೆ. ಆದರೂ ಸಹಕಾರ ಬ್ಯಾಂಕ್ ಗಳು ಅಸ್ಥಿತ್ವದಲ್ಲಿದ್ದು ಜನರು ಅದನ್ನು ಪ್ರೋತ್ಸಾಹಿಸಬೇಕು ಎಂದರು.
ಉಳ್ಳಾಲ ಚಿರುಂಭ ಶ್ರೀ ಭಗವತಿ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ ಮಾತನಾಡಿ, ದ.ಕ ಹಾಗೂ ಉಡುಪಿಗಳಲ್ಲಿ ಬಹುತೇಕ ಬ್ಯಾಂಕ್ ಗಳು ಹುಟ್ಟಿಕೊಂಡಿದ್ದು ಅವಿಭಜಿತ ಜಿಲ್ಲೆಗಳು ಬ್ಯಾಂಕಿಂಗ್ ನ ಕ್ಷೇತ್ರದ ತವರೂರಾಗಿದೆ. ಅವಿಭಜಿತ ಜಿಲ್ಲೆಯ ಮಹಿಳೆಯರಲ್ಲಿ ಉಳಿತಾಯದ ಮನೋಭಾವನೆ ಅಧಿಕವಾಗಿದೆ. ಇದೇ ಪರಿಕಲ್ಪಣೆಯಲ್ಲಿ ದ.ಕ ಜಿಲ್ಲೆಯಲ್ಲಿ ಬ್ಯಾಂಕ್ ಗಳು ಪ್ರಾರಂಭಿಸಿಲಾಗಿದೆ ಎಂದರು.
ಲಾಕರ್ ಉದ್ಘಾಟಿಸಿದ ನೋಟರಿ ನ್ಯಾಯವಾದಿ ಫಝಲ್ ರಹೀಮ್ ಮಾತನಾಡಿ, ಕಳೆದ 45 ವರ್ಷಗಳಲ್ಲಿ ಭಗವತಿ ಸಹಕಾರಿ ಬ್ಯಾಂಕ್ ಸಮಾಜದಲ್ಲಿ ಉತ್ತಮ ಸೇವೆ ನೀಡುತ್ತಾ ಬಂದಿದೆ. ಇದರಿಂದಾಗಿ ಉತ್ತಮ ಬ್ಯಾಂಕ್ ಆಗಿ ಬೆಳೆದು ಬಂದಿದೆ. ಪುತ್ತೂರಿನ ಬೆಳವಣಿಗೆಯಲ್ಲಿ ಬ್ಯಾಂಕ್ ಹೊಸ ಮೈಲುಗಲ್ಲು ಆಗಿ ಮೂಡಿಬರಲಿ ಎಂದರು.
ಪುತ್ತೂರು ತಿಯಾ ಸಮಾಜದ ಅಧ್ಯಕ್ಷ ಗೋಪಾಲ ಮಾತನಾಡಿ, ಪುತ್ತೂರಿನಲ್ಲಿರುವ ತಿಯಾ ಸಮಾಜದಿಂದ ಸಹಕಾರಿ ಸಂಘ ಪ್ರಾರಂಭಿಸುವ ಅಪೇಕ್ಷೆಯಿತ್ತು. ಆದರೆ ಅದು ಕೈಗೂಡಲಿಲ್ಲ. ಈಗ ನಮ್ಮದೇ ಸಮಾಜ ಬಾಂಧವರಿಂದ ಬ್ಯಾಂಕ್ ನ ಶಾಖೆ ಪ್ರಾರಂಭಗೊಂಡಿದ್ದು ಹೆಮ್ಮೆ ತಂದಿದೆ ಎಂದರು.
ಬ್ಯಾಂಕ್ ಅಧ್ಯಕ್ಷ ಬಿ.ಯಂ.ಮಾಧವ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ೪೮ ವರ್ಷಗಳ ಇತಿಹಾಸವಿರುವ ಸಹಕಾರ ಬ್ಯಾಂಕ್ ಆರ್ ಬಿ ಐ ಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಜನರು ಬ್ಯಾಂಕ್ ನಲ್ಲಿ ಧೈರ್ಯದಿಂದ ವ್ಯವಹರಿಸಬಹುದು. ಠೇವಣಿಗಳಿಗೆ ಆರ್ ಬಿ ಐ ಯ ಗ್ಯಾರಂಟಿಯಿದೆ. ಶಾಖೆಯಲ್ಲಿ ಅನುಭವೀ ಸಿಬಂಧಿಗಳಿದ್ದು ಗ್ರಾಹಕರಿಗೆ ಉತ್ತಮ ಸೇವೆ ದೊರೆಯಲಿದೆ. ಹಿರಿಯ ನಾಗರೀಕರ ಅನುಕೂಲಕ್ಕಾಗಿ ಮನೆ ಬಾಗಿಲಿಗೆ ಬಂದು ಸೇವೆ ನೀಡಲಿದ್ದಾರೆ ಎಂದರು.
ಬ್ಯಾಂಕ್ ನ ನಿಕಟಪೂರ್ವ ಅಧ್ಯಕ್ಷ ನಾರಾಯಣ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು.
ನೂತನ ಶಾಖೆಯನ್ನು ಸಮಾಜದ ಹಿರಿಯರಾದ ಜಯರಾಮ ಉಕ್ಕುಡ ಉದ್ಘಾಟಿಸಿದರು. ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಕಂಪ್ಯೂಟರ್ ವಿಭಾಗವನ್ನು ಉದ್ಘಾಟಿಸಿದರು. ಬ್ಯಾಂಕ್ ನ ಉಪಾಧ್ಯಕ್ಷ ದೇವದಾಸ ಕೊಲ್ಯ, ನಿರ್ದೇಶಕರಾದ ನಾರಾಯಣ ಕೆ., ಆನಂದ ಬಿ., ವಿಶ್ವನಾಥ, ಕಿರಣ್, ರಾಜೇಶ್ ಯು., ರಾಜೇಶ್ ಭಂಡಾರಿ, ಆಶಾ ಚಂದ್ರ ಮೋಹನ್, ಶರ್ಮಿಲಾ, ಸರೀಲ್ ಅರುಣ್ ಬಂಗೇರ, ಪದ್ಮನಾಭ ಬಿ. ಕುದ್ರೋಳಿ ಭಗವತಿ ಕ್ಷೇತ್ರದ ಅಧ್ಯಕ್ಷ ಗಣೇಶ್ ಕುಂಟಲಪಾಡಿ, ಹಾಗೂ ಮಹಾದೇವಿ ಸಂಕೀರ್ಣದ ಮಾಲಕ ರಾಜೇಶ್ ಯು.ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬ್ಯಾಂಕ್ ಪ್ರಧಾನ ವ್ಯವಸ್ಥಾಪಕಿ ಸುಷ್ಮಾ ರಾಜೇಶ್ ಸ್ವಾಗತಿಸಿದರು. ಪುತ್ತೂರು ಶಾಖಾ ವ್ಯವಸ್ಥಾಪಕ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಜೆಪ್ಪು ಶಾಖಾ ವ್ಯವಸ್ಥಾಪಕ ರಾಘವ ಉಚ್ಚಿಲ್, ಹಿರಿಯ ಸಹಾಯಕಿ ಶಕುಂತಲಾ ರಾಜ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕಿ ಆಶಾ ಚಂದ್ರಮೋಹನ್ ವಂದಿಸಿದರು.
ನಗರಸಭಾ ಸದಸ್ಯೆ ವಿದ್ಯಾ ಆರ್ ಗೌರಿ, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ, ಮೂರ್ತೆದಾರರ ಮಹಾ ಮಂಡಲದ ನಿರ್ದೇಶಕ ವಿಜಯ ಕುಮಾರ್ ಸೊರಕೆ, ರಾಘವೇಂದ್ರ ಪೈಂಟ್ಸ್ ಮ್ಹಾಲಕ ಸತ್ಯಶಂಕರ್ ಭಟ್, ಕೆನರಾ ಬ್ಯಾಂಕ್ ಮ್ಯಾನೇಜರ್ ಶ್ರೀನಿವಾಸನ್, ರಾಜೇಶ್ ಕರವೀರ್, ಪುತ್ತೂರು ತಿಯಾ ಸಮಾಜದ ಉಪಾಧ್ಯಕ್ಷ ಜೆ .ಪಿ ಸಂತೋಷ್ ಮುರ, ಸಂಧ್ಯಾ ರಾಜೇಶ್, ಸರಿತಾ ಬಿ.ಎಮ್, ಮೋಹಿತ್ ಉಕ್ಕುಡ, ಕುದ್ರೋಳಿ ಭಗವತಿ ಕ್ಷೇತ್ರದ ಮಹಿಳಾ ಘಟಕದ ಉಷಾ ಪ್ರಭಾಕರ್ ಯೆಯ್ಯಾಡಿ, ಯಶೋಧ, ಬ್ಯಾಂಕ್ ನ ಮೌಲ್ಯ ಮಾಪಕ ಆದರ್ಶ ಸಹಿತ ಹಲವು ಮಂದಿ ಗಣ್ಯರು ಭೇಟಿ ನೀಡಿ ಶುಭಹಾರೈಸಿದರು.