ಪುತ್ತೂರು: ಪ್ರಪಂಚದಾದ್ಯಂತದ ಕ್ರಿಶ್ಚಿಯನ್ನರು ಈ ವಾರವನ್ನು ಪವಿತ್ರ ವಾರವನ್ನಾಗಿ ಆಚರಿಸುತ್ತಿದ್ದಾರೆ, ಮಾ.24 ರಂದು ಈಸ್ಟರ್ ಮೊದಲು ಗರಿಗಳ ಭಾನುವಾರದಿಂದ ಪ್ರಾರಂಭವಾಗುತ್ತದೆ. ಮಾ.29 ರಂದು ಶುಭ ಶುಕ್ರವಾರ ಮತ್ತು ಈಸ್ಟರ್ ಮೊದಲು ಬರುವ ಪವಿತ್ರ ಗುರುವಾರವನ್ನು ಆಚರಿಸುತ್ತಾರೆ.

ಯೇಸು ಕ್ರಿಸ್ತನು ತನ್ನ ಶಿಷ್ಯರೊಂದಿಗೆ ಕೊನೆಯ ಭೋಜನವನ್ನು ಮಾಡಿದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ಯೇಸು ತನ್ನ ಶಿಷ್ಯರೊಂದಿಗೆ ಊಟ ಮಾಡಿದ ಕೊನೆಯ ಭೋಜನವನ್ನು ಈ ದಿನವು ಗುರುತಿಸುತ್ತದೆ. ನಾವೆಲ್ಲರೂ ಸಮಾನರು ಎಂಬುದರ ಸಂಕೇತವಾಗಿ ನಾವು ವಿನಮ್ರರಾಗಿರಬೇಕು ಮತ್ತು ಪರಸ್ಪರರ ಪಾದಗಳನ್ನು ತೊಳೆಯುವುದರ ಮೂಲಕ ಸೇವಾ ಮನೋಭಾವನೆಗೆ ಸಿದ್ಧರಾಗಿರಬೇಕು ಎಂದು ಯೇಸು ತನ್ನ ಶಿಷ್ಯರಿಗೆ ಕಲಿಸಿದ ಪಾಠವನ್ನು ಸಹ ಇದು ನೆನಪಿಸುತ್ತದೆ.

ಪುತ್ತೂರಿನ ಹೃದಯ ಭಾಗದಲ್ಲಿ ಇರುವ ಮಾಯಿದೆ ದೇವುಸ್ ಚರ್ಚ್ ನಲ್ಲಿ ಪವಿತ್ರ ಗುರುವಾರವನ್ನು ಮಾ.28 ರಂದು ಆಚರಿಸಲಾಯಿತು. ಪ್ರಧಾನ ಧರ್ಮಗುರುಗಳಾಗಿ ವಂದನೀಯ ಲೋಹಿತ್ ಅಜಯ್ ಮಸ್ಕರೇನಸ್ ಬಲಿ ಪೂಜೆ ನೆರವೇರಿಸಿದರು. ಪ್ರಭು ಕ್ರಿಸ್ತರ ಪ್ರತಿನಿಧಿಯಾಗಿ ಅತೀ ವಂ. ಲಾರೆನ್ಸ್ ಮಸ್ಕರೇನ್ಹಸ್ ಧರ್ಮ ಕೇಂದ್ರದ ವಿವಿಧ ವರ್ಗಗಳಿಂದ ಆರಿಸಲ್ಪಟ್ಟ ಹನ್ನೆರಡು ಮಂದಿಯ ಪಾದಗಳನ್ನು ತೊಳೆಯುವುದರ ಮೂಲಕ ಪರಸೇವೆ, ಪರಸ್ನೇಹ, ದೀನತೆಯ ಮಹತ್ವವನ್ನು ತಿಳಿಸಿದರು.
ವಂ. ಸ್ಟ್ಯಾನಿ ಪಿಂಟೋ ರವರು ತಮ್ಮ ಪ್ರವಚನದಲ್ಲಿ ಬಲಿಪೂಜೆಯ ಮಹತ್ವವನ್ನು ಹಾಗೂ ಯಾಜಕಿ ದೀಕ್ಷೆಯ ದಿನವಾದ ಇಂದು ಅದರ ಮಹತ್ವವನ್ನು ಸಾರಿ ಹೇಳಿದರು.
ಸಹಾಯಕ ಧರ್ಮಗುರುಗಳಾದ ವಂದನೀಯ ಲೋಹಿತ್ ಅಜಯ್ ಮಸ್ಕರೇನಸ್ ರವರು ಪರಮ ಪ್ರಸಾದದ ಪ್ರತಿಷ್ಠಾಪನೆ ಮತ್ತು ಆರಾಧನೆಯನ್ನು ವಂದನಿಯಾ ರೂಪೇಶ್ ತೌರೋರವರು ನಡೆಸಿಕೊಟ್ಟರು.
ಯೇಸುವಿನ ಕೊನೆಯ ಭೋಜನದ ಸಂಕೇತವಾಗಿ ನೆರೆದಿದ್ದ ಎಲ್ಲಾ ಭಕ್ತಾದಿಗಳಿಗೆ ರೊಟ್ಟಿಯನ್ನು ವಿತರಿಸಲಾಯಿತು.