ವಿವೇಕಾನಂದ ಕಾಲೇಜಿನ ನವೀಕೃತ ಜಾಲತಾಣ ಲೋಕಾರ್ಪಣೆ

ಪುತ್ತೂರು: ಆಧುನಿಕ ಯುಗದಲ್ಲಿ ಸಂಸ್ಥೆಯ ಬೆಳವಣಿಗೆಗೆ ವೆಬ್ಸೈಟ್ ತುಂಬಾ ಪ್ರಾಮುಖ್ಯತೆಯನ್ನು ವಹಿಸುತ್ತದೆ. ಬಹಳ ವೇಗವಾಗಿ ಬದಲಾಗುವ ತಂತ್ರಜ್ಞಾನವನ್ನು ನಾವು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಮತ್ತು ಸಮಾಜಕ್ಕೆ ಪರೀಕ್ಷೆಯ ವೇಳಾಪಟ್ಟಿಗಳು, ಶೈಕ್ಷಣಿಕ ನೆರವು, ಕೋರ್ಸ್ ವಿವರಣೆಗಳು ಮತ್ತು ಇತರ ಪ್ರಮುಖ ಪ್ರಕಟಣೆಗಳ ವಿವರಗಳನ್ನು ನೀಡಬಹುದು. ಈ ಮೂಲಕ ಕಾಲೇಜಿನ ಎಲ್ಲಾ ಮಾಹಿತಿ ಅಂಗೈ ಅಂಗಳದಲ್ಲೆ ದೊರಕುವುದು ಎಂದು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ  ಡಾ ಶ್ರೀಪತಿ ಕಲ್ಲೂರಾಯ ಹೇಳಿದರು.

ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಐಕ್ಯೂಎಸಿ ಇದರ ಸಹಯೋಗದಲ್ಲಿ ನಡೆದ ನವೀಕೃತ ಜಾಲತಾಣದ ಲೋಕಾರ್ಪಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ.ಎನ್. ಮಾತನಾಡಿ, ನವ ಮಾಧ್ಯಮದ ಯುಗದಲ್ಲಿ ನಾವಿದ್ದೇವೆ, ಪ್ರತಿಯೊಬ್ಬರೂ ಒಂದು ಸಂಸ್ಥೆಯ ಬಗ್ಗೆ ತಿಳಿಯಬೇಕಾದರೆ ವೆಬ್ಸೈಟ್ ಅಥವಾ ಸಮಾಜಿಕ ಜಾಲತಾಣವನ್ನು ಪರೀಕ್ಷಿಸಿಯೇ ಮುಂದುವರೆಯುವುದು.ಈ ನಿಟ್ಟಿನಲ್ಲಿ ಕಾಲೇಜು, ಪಠ್ಯ ಕ್ರಮ ಹಾಗೂ ಕಾಲೇಜಿನ ಸೌಲಭ್ಯಗಳ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಮತ್ತು ಸಮಾಜಕ್ಕೆ ಪಸರಿಸುವುದಕ್ಕೆ ಕಾಲೇಜು ವೆಬ್ಸೈಟ್ ತುಂಬಾ ಅವಶ್ಯಕ ಎಂದರು.































 
 

ಕಾಲೇಜು ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ ವಿ. ಗಣಪತಿ ಭಟ್ ಸ್ವಾಗತಿಸಿ, ವಿಶೇಷ ಅಧಿಕಾರಿ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥ ಡಾ ಶ್ರೀಧರ್ ನಾಯ್ಕ್ ವಂದಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮನಮೋಹನ್ ಎಂ ಕಾರ್ಯಕ್ರಮ ನಿರೂಪಿಸಿದರು.

ಕಾಲೇಜಿನ ತೃತೀಯ ಬಿ.ಸಿ.ಎ. ವಿಭಾಗದ ವಿದ್ಯಾರ್ಥಿನಿ ಹಾಗೂ ಸರ್ವಜ್ಞ ಇಂಫೋಟೆಕ್ನ ಸಾಫ್ಟ್ವೆರ್ ಡೆವಲಪರ್ ಭಕ್ತಿಶ್ರೀ ಶರ್ಮ ನವೀಕೃತ ಜಾಲತಾಣವನ್ನು ಲೋಕಾರ್ಪಣೆಗೊಳಿಸಿದರು. ಜಾಲತಾಣ ವಿನ್ಯಾಸಕಾರ ಅಶೋಕ್ ಕಲ್ಚರ್ ಅವರನ್ನು ಸನ್ಮಾನಿಸಲಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top