ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ನಡೆಯುವ ಕಟ್ಟೆಪೂಜೆ ಹಾಗೂ ಪೇಟೆ ಸವಾರಿ ಪ್ರಯುಕ್ತ ಖ್ಯಾತ ಈವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆ “ಟೈಮ್ & ಟೈಡ್” ಪ್ರಸ್ತುತ ಪಡಿಸುವ “ಪುತ್ತೂರ ಹಬ್ಬ” ಪುತ್ತೂರುದ ಮುತ್ತುಲೆನ ಪರ್ಬ ಏ.15 ರಂದು ಬನ್ನೂರು ಜೋಡುಕಟ್ಟೆ ಮೈದಾನದಲ್ಲಿ ನಡೆಯಲಿದೆ.
ಪುತ್ತೂರಿನ ಅತೀ ದೊಡ್ಡ ಪರಿಪೂರ್ಣ ಮನರಂಜನೆಯ ಶೋ ಇದಾಗಿದ್ದು, ಸಂಗೀತದ ರಸದೌತಣ, ಮಂಗಳೂರು ಹೆಜ್ಜೆ ನಾದ ನೃತ್ಯ ತಂಡದಿಂದ ಮನಸೂರೆಗೊಳಿಸುವ ನೃತ್ಯ, ಚಲನಚಿತ್ರ ನಟ-ನಟಿಯರ ಸಮಾಗಮದ ಜತೆ ಖ್ಯಾತ ಗಾಯಕರಿಂದ ಎಂದೂ ಮರೆಯದ ಹಾಡುಗಳು ಪ್ರಸ್ತುತಗೊಳ್ಳಲಿದ್ದು, ಅದ್ಭುತ ಕಾರ್ಯಕ್ರಮವಾಗಿ ಪುತ್ತೂರಿನಲ್ಲಿ ಮೇಳೈಸಲಿದೆ.
ಕಾರ್ಯಕ್ರಮಕ್ಕೆ ಪುತ್ತೂರಿನ “ನ್ಯೂಸ್ ಪುತ್ತೂರು” ಮೀಡಿಯಾ ಪಾರ್ಟ್ನರ್ ಆಗಿದ್ದು, ವಿಷನ್ ಪಾರ್ಟ್ನ್ರ್ ರ್ ಆಗಿ ಮಾಣಿ ಪೆರಾಜೆ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ, ರೇಡಿಯೋ ಪಾರ್ಟ್ನರ್ ಆಗಿ ರೆಡ್ ಎಫ್‍ಎಂ 93.5, ಕ್ರಿಯೇಟಿವ್ ಪಾರ್ಟ್ನರ್ ಆಗಿ ಆರ್ವಿ ಇಂಟರ್ ಗ್ರಾಫಿಕ್ಸ್, ಪ್ರಿಂಟ್ ಪಾರ್ಟ್ನರ್ ಆಗಿ ಮಧುಬೇನ್ ಆಗಿ ಸಾಥ್ ನೀಡಲಿದ್ದಾರೆ.
ಕಾರ್ಯಕ್ರಮ ವೀಕ್ಷಿಸಲು ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿದೆ.
ಬನ್ನೂರು ಫ್ರೆಂಡ್ಸ್ ಜೋಡುಕಟ್ಟೆ, ಅಯೋಧ್ಯಾನಗರದ ಶ್ರೀ ಶಿವಪಾರ್ವತಿ ಮಂದಿರ, ಅಯೋಧ್ಯಾನಗರ ಆಟೋ ಚಾಲಕ-ಮಾಲಕರ ಸಂಘ ಹಾಗೂ ಪಡೀಲು ಶ್ರೀ ಮಹಾಲಿಂಗೇಶ್ವರ ಸೇವಾ ಸಮಿತಿ ಕಾರ್ಯಕ್ರಮಕ್ಕೆ ಶುಭ ಕೋರಲಿದ್ದಾರೆ.
ವಾಹನ ನಿಲುಗಡೆ ವ್ಯವಸ್ಥೆ :
ಮೆಸ್ಕಾಂ ಕಚೇರಿ ಆವರಣ, ಬನ್ನೂರು ಕೋಟೆ ಸೈಟ್ ಹಾಗೂ ಬನ್ನೂರು ಆರ್.ಟಿ.ಒ. ಕ್ಯಾಂಪಸ್‍ನಲ್ಲಿ ಭದ್ರತೆಯೊಂದಿಗೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಈ ವ್ಯವಸ್ಥೆಯ ಸದುಪಯೋಗ ಪಡೆಯಬಹುದು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.