ಲಕ್ಷಾಂತರ ನಗದು, ಚಿನ್ನಾಭರಣ ಕಳವು | ಇಬ್ಬರು ಆರೋಪಿಗಳ ಬಂಧನ

ಕಡಬ: ಮನೆಯೊಂದರಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಪ್ರಕರಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಾದತ್ ಆಲಿ ಫರಂಗಿಪೇಟೆ (30) ಮತ್ತು ಹಮೀದ್ ವಳಚ್ಚಿಲ್ (31) ಬಂಧಿತ ಆರೋಪಿಗಳು

ಆರೋಪಿಗಳು ಮಾ.11 ರಂದು ರಾಮಕುಂಜದ ನೆಬಿಸಾ ಎಂಬವರ ಮನೆಯ ಬಾಗಿಲು ಮುರಿದು ಕೊಠಡಿಯಲ್ಲಿದ್ದ ಕಪಾಟಿನಿಂದ 1.08 ಲಕ್ಷ ರೂ. ನಗದು, 13 ಪವನ್ ಚಿನ್ನಾಭರಣ ಕಳವು ಮಾಡಿದ್ದರು. ಒಟ್ಟು 5.20 ಲಕ್ಷ ರೂ. ಆಗಿತ್ತು. ಈ ಕುರಿತು ನೆಬಿಸಾ ಅವರು ಕಡಬ ಠಾಣೆಗೆ ದೂರು ನೀಡಿದ್ದರು. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತರ ಮೂವರು ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top