ಪುತ್ತೂರು: ಕಳೆದ 48 ವರ್ಷಗಳಿಂದ ಸಹಕಾರಿ ಬ್ಯಾಂಕಿಂಗ್‍ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಾ ಬಂದಿರುವ ““ಶ್ರೀ ಭಗವತಿ ಸಹಕಾರ ಬ್ಯಾಂಕ್‍ಲಿ.”” 8ನೇ ಶಾಖೆ ಪುತ್ತೂರಿನ ಮಾ.28 ರಂದು ಏಳ್ಮುಡಿಯಲ್ಲಿರುವ ಮಹಾದೇವಿ ಸಂಕೀರ್ಣದ ಒಂದನೇ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ ಎಂದು ಬ್ಯಾಂಕ್‍ಅಧ್ಯಕ್ಷ ಮಾಧವ ಬಿ.ಎಮ್. ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಂಗಳೂರಿನ ಮೋರ್ಗನ್ಸ್ ಗೇಟ್ ನಲ್ಲಿರುವ ಜಪ್ಪುನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ಬಳಿಕ ತೊಕ್ಕೊಟ್ಟು, ಕಂಕನಾಡಿ, ಬಿ.ಸಿ.ರೋಡು, ಕೈಕಂಬ, ಮಂಗಳೂರು ಮಾರ್ಕೆಟ್ ರೋಡ್, ವಿಟ್ಲ ಶಾಖೆಗಳನ್ನು ತೆರೆದಿದ್ದು ಇದೀಗ ಪುತ್ತೂರಿನಲ್ಲಿ 8ನೇ ಶಾಖೆಯನ್ನು ಉದ್ಘಾಟಿಸಲಿದೆ ಎಂದು ತಿಳಿಸಿದರು.
1976 ರಲ್ಲಿ ಮಂಗಳೂರು ಜೆಪ್ಪು ಎಂಬಲ್ಲಿ ತೀಯಾ ಸಮಾಜದ ಜೆ.ಜಗನ್ನಾಥ್ ಅವರ ನೇತೃತ್ವದಲ್ಲಿ ಆರಂಭಗೊಂಡ ಬ್ಯಾಂಕ್‍ಸಮಾಜದಲ್ಲಿ ಅತೀ ಹಿಂದುಳಿದ ವರ್ಗದಲ್ಲಿರುವ ತೀಯಾ ಸಮಾಜ ಬಾಂಧವರಿಗೆ ಆರ್ಥಿಕ ಸೌಲಭ್ಯಗಳನ್ನು ಒದಹಗಿಸುವ ಸಂಸ್ಥೆಯನ್ನು ತೀರ್ಮಾನಿಸಿ ಇದೀಗ ಏಳು ಶಾಖೆಗಳು ಕಾರ್ಯಾಚರಿಸುತ್ತಿದ್ದು, ಎಂಟನೇ ಶಾಖೆ ಪುತ್ತೂರಿನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಹೇಳಿದ ಅವರು, ಇದೀಗ ಒಟ್ಟು ಶಾಖೆಗಳಲ್ಲಿ 29 ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ. ಬ್ಯಾಂಕ್‍ನಲ್ಲಿ ಗೃಹಸಾಲ, ಅಡವು ಸಾಲ, ಚಿನ್ನಾಭರಣ ಸಾಲ ಹಾಗೂ ಸ್ಯಾಲರಿ ಆಧಾರದಲ್ಲಿ ಸಾಲಗಳನ್ನು ತ್ವರಿತ ಸಮಯದಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದರು.
ಮಾ.28 ರಂದು ಪುತ್ತೂರು ಶಾಖೆಯನ್ನು ವಾಣಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ ಉದ್ಘಾಟಿಸಲಿದ್ದು, ಉದ್ಯಮಿ ಕಿಶೋರ್ ಕುಮಾರ್, ನ್ಯಾಯವಾದಿ ಸತೀಶನ್, ಸುದಾನ ಶಾಲಾ ಸಂಚಾಲಕ ರೆ.ವಿಜಯ ಹಾರ್ವಿನ್, ಉದ್ಯಮಿ ಜಯಂತ ನಡುಬೈಲು, ತೀಯಾ ಸಮಾಜದ ಗೋಪಾಲ್, ಹಿಮಾ ರೆಫ್ರಿರೇಟರ್‍ನ ರಾಜೇಶ್‍ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್‍ಉಪಾಧ್ಯಕ್ಷ ದೇವದಾಸ್ ಕೊಲ್ಯ, ಪ್ರಧಾನ ವ್ಯವಸ್ಥಾಪಕಿ ಸುಷ್ಮಾ ರಾಜೇಶ್, ನಿರ್ದೇಶಕ ಕಿರಣ್, ಬ್ರಾಂಚ್ ಮ್ಯಾನೇಜರ್ ರಾಘವ ಉಪಸ್ಥಿತರಿದ್ದರು.