46 ಅಭ್ಯರ್ಥಿಗಳನ್ನೊಳಗೊಂಡ ಕಾಂಗ್ರೆಸ್ ನ ನಾಲ್ಕನೇ ಪಟ್ಟಿ ಬಿಡುಗಡೆ | ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಸ್ಪರ್ಧೆ

ಹೊಸದಿಲ್ಲಿ: ಕಾಂಗ್ರೆಸ್ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.

 46 ಅಭ್ಯರ್ಥಿಗಳ ಹೆಸರುಗಳನ್ನೊಳಗೊಂಡ ಈ ಪಟ್ಟಿ ಶನಿವಾರ ರಾತ್ರಿ ಬಿಡುಗಡೆಗೊಂಡಿದ್ದು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ತಿರುವಳ್ಳೂರಿನಿಂದ ಸ್ಪರ್ಧಿಸಲಿದ್ದಾರೆ.

ವಾರಣಾಸಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಎದುರು ಕಾಂಗ್ರೆಸ್ ಹಿರಿಯ ನಾಯಕ ಅಜಯ್ ರಾಯ್ ಮತ್ತೆ ಸ್ಪರ್ಧಿಸಲಿದ್ದಾರೆ.





























 
 

ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ವಾರ್ ರೂಂ ನಿರ್ವಹಿಸಿ ಕಾಂಗ್ರೆಸ್ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದ ಸಸಿಕಾಂತ್ ಸೆಂಥಿಲ್ ಗೆ ತಮಿಳುನಾಡಿನ ತಿರುವಳ್ಳೂರಿನಿಂದ ಟಿಕೆಟ್ ನೀಡಲಾಗಿದೆ.

ಅಸ್ಸಾಂ 1, ಅಂಡಮಾನ್ ನಿಕೋಬಾರ್ 1, ಚತ್ತೀಸ್ ಗಡ್ 1, ಜಮ್ಮು ಕಾಶ್ಮೀರ 2, ಮಧ್ಯಪ್ರದೇಶ 12, ಮಹಾರಾಷ್ಟ್ರ 4, ಮಣಿಪುರ 2, ಮಿಜೋರಾಂ 1, ರಾಜಸ್ಥಾನ 3, ತಮಿಳುನಾಡು 7, ಉತ್ತರ ಪ್ರದೇಶ 9, ಉತ್ತರಾಖಂಡ 2, ಪಶ್ಚಿಮ ಬಂಗಾಳದ 1 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top