ವಿವಾದಾತ್ಮಕ ದೇವಾಲಯಗಳ ತೆರಿಗೆ ಮಸೂದೆಗೆ ಸಹಿ ಹಾಕಲು ರಾಜ್ಯಪಾಲರಿಂದ ನಿರಾಕರಣೆ

ವಿವಾದಾತ್ಮಕ ದೇವಾಲಯಗಳ ತೆರಿಗೆ ಮಸೂದೆಗೆ ರಾಜ್ಯಪಾಲರು ಸಹಿ ಹಾಕಲು ನಿರಾಕರಿಸಿದ್ದು, ಈ ಕುರಿತು ರಾಜ್ಯ ಸರಕಾರದ ಎದುರು ಹಲವು ಪ್ರಶ್ನೆಗಳನ್ನು ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಈ ಮಸೂದೆಗೆ ಸಹಿ ಹಾಕಲು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ನಿರಾಕರಿಸಿದ್ದಾರೆ ಎಂಬ ವರದಿಯನ್ನು ರಾಷ್ಟ್ರೀಯ ದೃಶ್ಯ ಮಾಧ್ಯಮವೊಂದು ಬಿತ್ತರಿಸಿದೆ.

ದೇವಾಲಯಗಳಿಗೆ ಮಾತ್ರ ಯಾಕೆ ತೆರಿಗೆ, ಇತರ ಧಾರ್ಮಿಕ ಸಂಸ್ಥೆಗಳಿಗೆ ತೆರಿಗೆ ಯಾಕೆ ವಿಧಿಸಬಾರದು ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.































 
 

ಕರ್ನಾಟಕ ಹಿಂದೂ ಧಾರ್ಮಿಕ ಮತ್ತು ದತ್ತಿಗಳ ಮಸೂದೆ-2024 ನ್ನು ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‍ ಸರಕಾರ ಫೆ.21 ರಂದು ಮಂಡಿಸಿ ವಿಧಾನಸಭೆಯಲ್ಲಿ ಅಂಗೀಕರಿಸಿತ್ತು.

ಏನಿದು ಮಸೂದೆ :

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಮಸೂದೆ-2024ರಂತೆ ವಾರ್ಷಿಕವಾಗಿ 10 ಲಕ್ಷ ಮತ್ತು 1 ಕೋಟಿಗಿಂದ ಕಡಿಮೆ ಆದಾಯವಿರುವ ದೇವಾಲಯಗಳ ಮೇಲೆ ಶೇ.5 ರಷ್ಟು ತೆರಿಗೆಯನ್ನು ವಿಧಿಸಲು ಸೂಚಿಸುತ್ತದೆ. ಹೆಚ್ಚುವರಿಯಾಗಿ 1 ಕೋಟಿಗಿಂದ ಅಧಿಕ ಆದಾಯ ಹೊಂದಿರುವ ದೇವಾಲಯಗಳು ರಾಜ್ಯ ಸರಕಾರದಿಂದ ಶೇ.10 ಶುಲ್ಕಕ್ಕೆ ಒಳಪಟ್ಟಿರುತ್ತದೆ. ಹೀಗೆ ಸಂಗ್ರಹಿಸಿದ ನಿಧಿಗಳನ್ನು ರಾಜ್ಯ ಧಾರ್ಮಿಕ ಪರಿಷತ್ ನಿರ್ವಹಿಸುವ ಸಾಮಾನ್ಯ ಪೂಲ್ ನಿಧಿಗಾಗಿ ಉದ್ದೇಶಿಸಲಾಗಿದೆ. ಈ ನಿಧಿಯನ್ನು ಅರ್ಚಕರ ಯೋಗಕ್ಷೇಮಕ್ಕಾಗಿ ಗೊತ್ತುಪಡಿಸಲಾಗಿದೆ. ಇದರಲ್ಲಿ ವಿಮಾ ರಕ್ಷಣೆ, ಸಾವಿನ ಸಂದರ್ಭದಲ್ಲಿ ಪರಿಹಾರ ಮತ್ತು ಸರಿಸುಮಾರು 40 ಸಾವಿರ ಅರ್ಚಕ ಕುಟುಂಬಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ, ವಾರ್ಷಿಕ 5 ಲಕ್ಷಕ್ಕಿಂತ ಕಡಿಮೆ ಇರುವ ಸಿ ವರ್ಗದ ದೇವಾಲಯಗಳ ನಿರ್ವಹಣೆ ಖಚಿತಪಡಿಸಿಕೊಳ್ಳಲು ಬೆಂಬಲಿಸುವ ಗುರಿಯನ್ನು ಇದು ಹೊಂದಿದೆ.

ಬಿಜೆಪಿ ಹಾಗೂ ಜೆಡಿಎಸ್‍ ಪಕ್ಷಗಳು ಮಸೂದೆಯನ್ನು ಹಿಂದೂ ವಿರೋಧಿ ಎಂದು ಟೀಕಿಸಿದ್ದು, ಕರ್ನಾಟಕದ ಕಾಂಗ್ರೆಸ್ ಸರಕಾರ ದೇವಸ್ಥಾನದ ಹಣವನ್ನು ಬಳಸಿಕೊಂಡು ತನ್ನ ಆರ್ಥಿಕತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಎಂದು ಆರೋಪಿಸಿದ್ದು, ಸಿದ್ಧರಾಮಯ್ಯ ಆಡಳಿತ ದೇವಸ್ಥಾನದ ಆದಾಯವನ್ನು ಇತರ ಧರ್ಮಗಳಿಗೆ ತಿರುಗಿಸಬಹುದು ಎಂದು ಆರೋಪಿಸಿವೆ.

1 thought on “ವಿವಾದಾತ್ಮಕ ದೇವಾಲಯಗಳ ತೆರಿಗೆ ಮಸೂದೆಗೆ ಸಹಿ ಹಾಕಲು ರಾಜ್ಯಪಾಲರಿಂದ ನಿರಾಕರಣೆ”

  1. Hindu is not protesting!
    Let’s sit at home?
    Hindu temples are taxable, churches masjids are spared for vote bank
    What happened to HINDU?
    WHERE ALL OUR HINDU Organization?

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top