ಮಂಗಳೂರು: ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ಬಳಿಕ ಮಾ.20 ರವರೆಗೆ 12,300 ರೂಪಾಯಿ ಮೌಲ್ಯದ 21.34 ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದೆ. 3,13,500 ರೂ.ಗಳ ಮೌಲ್ಯದ 1.65 ಕೆಜಿ ಡ್ರಗ್ಸ್ ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ನೀತಿ ಸಂತೆ ಜಾರಿಯಾದ ದಿನದಿಂದ ಮಾ.20ವರೆಗೆ ದೂರವಾಣಿ ಮೂಲಕ (1950) ಸಾರ್ವಜನಿಕರಿಂದ 75 ಕರೆಗಳನ್ನು ಸ್ವೀಕರಿಸಿ ಸ್ಪಂದಿಸಲಾಗಿದೆ ಸಿ-ಸಿಲ್ ಆಪ್ ಮೂಲಕ 11 ದೂರುಗಳು ಸ್ವೀಕೃತಗೊಂಡಿದೆ. ಈ ಎಲ್ಲಾ ದೂರುಗಳನ್ನು ವಿಲೇವಾರಿ ಮಾಡಲಾಗಿದೆ.
ಎನ್. ಜಿ. ಆರ್. ಎಸ್ ಪೊರ್ಟಲ್ ಮೂಲಕ ಜಿಲ್ಲೆಯಲ್ಲಿ 27 ದೂರುಗಳು ಸ್ವೀಕೃತಗೊಂಡಿದೆ. 22 ದೂರುಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಮುಹಿಲನ್ ಮುಲ್ಲೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.